ಕೂಡಿಗೆ, ಜೂ. 24: ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಶಾಲಾ ಸಂಸತ್ ರಚನೆ ಮಾಡಲಾಯಿತು.

ಪ್ರಧಾನಮಂತ್ರಿಯಾಗಿ ಅನುಷಾ ಹೆಚ್.ಎ. ಆಯ್ಕೆಯಾದರು. ಉಪ ಪ್ರಧಾನ ಮಂತ್ರಿಯಾಗಿ ಫಾತಿಮತ್ತಲ್ ನಿಫಾನ ಪಿ.ಎನ್, ಗೃಹಮಂತ್ರಿಯಾಗಿ ಸಂಜಯ್ ಪಿ.ಯು, ಆರೋಗ್ಯ ಮಂತ್ರಿಗಳಾಗಿ ಧರಣಿ, ಶಂಶಾದ್, ಕ್ರೀಡಾ ಮಂತ್ರಿಗಳಾಗಿ ಶರವಣ, ಪವಿತ್ರ, ತೋಟಗಾರಿಕಾ ಮಂತ್ರಿಗಳಾಗಿ ಮಹೇಶ್, ಶರಣ್, ಸರೀನ, ಶಿಕ್ಷಣ ಮಂತ್ರಿಗಳಾಗಿ ಚೈತ್ರ ಪಿ.ಎಂ, ಪವಿತ್ರ ಹೆಚ್.ಸಿ, ವಾರ್ತಾಮಂತ್ರಿಗಳಾಗಿ ಸರಿತಾ ಎಂ, ದಿವ್ಯ ಪಿ.ಎಂ, ನೀರಾವತಿ ಮಂತ್ರಿಗಳಾಗಿ ಹರ್ಷ, ಶ್ವೇತಾ, ಜಾಬಿಕ್, ಶೌಚಾಲಯ ನಿರ್ವಹಣಾ ಮಂತ್ರಿ ಹೇಮಾವತಿ, ಲಕ್ಷ್ಮಿ, ಸಫಾಯಿ ಮಂತ್ರಿಗಳಾಗಿ ಸುಂದರ, ಅಜ್ಮಲ್, ಯಶಸ್ವಿನಿ, ಲಾವಣ್ಯ, ಆಹಾರ ಮಂತ್ರಿ ವಿಷ್ನೇಶ್, ತಸ್ಲೀಮ, ಸಹಲ, ಪೂರ್ವಿ, ಸಾಂಸ್ಕøತಿಕ ಮಂತ್ರಿಗಳಾಗಿ ರೂಪ, ರಾಜೇಶ್ವರಿ ಹಾಗೂ ಇತರ ಶಾಲಾ ನಾಯಕರುಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯಶಿಕ್ಷಕ ಹೆಚ್.ಕೆ. ಕುಮಾರ್ ವಿದ್ಯಾರ್ಥಿಗಳಿಗೆ ಚುನಾವಣೆಯ ಸಂಪೂರ್ಣ ವಿವರವನ್ನು ನೀಡಿದರು. ಇತರ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಪಾಲ್ಗೊಂಡಿದ್ದರು.