ಸಿದ್ದಾಪುರ, ಜೂ 24: ನೆಲ್ಯಹುದಿಕೇರಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರಕ್ಕೆ ಒತ್ತಾಯಿಸಿ ಸಿ.ಪಿ.ಐ (ಎಂ) ನೆಲ್ಯಹುದಿಕೇರಿ ಗ್ರಾಮಸಮಿತಿಯಿಂದ ಪ್ರತಿಭಟನೆ ನಡೆಯಿತು. ಗ್ರಾ.ಪಂ ಆವರಣಕ್ಕೆ ಜಮಾಯಿಸಿದ ಪ್ರತಿಭಟನಾಕಾರರು ಗ್ರಾ.ಪಂ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಸಿ.ಪಿ.ಐ (ಎಂ) ಮುಖಂಡ ಪಿ.ಆರ್ ಭರತ್ ಮಾತನಾಡಿದರು.

ಇದೇ ಸಂದರ್ಭ ಗ್ರಾ.ಪಂ ಕಾರ್ಯದರ್ಶಿ ಚಂದ್ರಶೇಖರ್ ಬಳಿ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಕೆ.ಯು ಮೋಣಪ್ಪ, ರವಿ, ಬೋಜಿ, ಸುಮಿತ್ರ, ಮುಸ್ತಫ ಸೇರಿದಂತೆ ಇನ್ನಿತರರು ಇದ್ದರು.