ಮಡಿಕೇರಿ, ಜೂ. 23: ಸಮಗ್ರ ಶಿಕ್ಷಣ ಯೋಜನೆಯ ಆಬಿಯಾನದಡಿಯಲ್ಲಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಆಯುಕ್ತರು. ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5 ನೇ ತರಗತಿಗೆ ಹಿಂಬಡ್ತಿ ನೀಡಿದೆ. ಅಲ್ಲದೆ 6 ರಿಂದ 8ನೇ ತರಗತಿಯಲ್ಲಿ ಭೋದನೆ ಮಾಡುವ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುತ್ತಿದೆ. ಇದು ಅನ್ಯಾಯ ಎಂದು ಪ್ರತಿಭಟಿಸಿ ಕೂಡಿಗೆ ಡಯಟ್ ಅವರಣದಲ್ಲಿ ಎಲ್ಲಾ ಶಿಕ್ಷಕರು ಸೇರಿ ತರಬೇತಿ ಬಹಿಷ್ಕರಿಸಿ ಸಾಂಕೇತಿಕವಾಗಿ ಪ್ರತಿಭಟಿನೆ ನಡೆಸಿದರು.
ಅನ್ಯಾಯವನ್ನು ಸರಕಾರದ ಗಮನಕ್ಕೆ ತರುವದಕ್ಕಾಗಿ ಕೂಡಿಗೆ ಡಯಟ್ ಅವರಣದಲ್ಲಿ ಈ ಸಂದರ್ಭ ಮನವಿಯನ್ನು ಡಯಟ್ ಪ್ರಾಂಶುಪಾಲ ವಾಲ್ಟರ್ ಡಿ. ಮೇಲ್ಲೋ ಅವರಿಗೆ ನೀಡಲಾಯಿತು.
ರಾಜ್ಯ ಪ್ರ್ರಾಥಮಿಕ ಶಾಲಾ ಪದವೀಧÀರ ಶಿಕ್ಷಕರ ಸಂಘು ತಾಲೂಕು ಘಟಕ ಸೋಮವಾರಪೇಟೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಸೋಮವಾರಪೇಟೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅದ್ಯಕ್ಷ ಬಿ.ಸಿ. ರಾಜು ಅಧ್ಯಕ್ಷತೆಯಲ್ಲಿ ಈ ಪ್ರತಿಭಟನೆಯನ್ನು ನಡೆಸಲಾಯಿತು.
ರಾಜ್ಯಾದ್ಯಂತ ಫ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದವೀಧರ ಶಿಕ್ಷಕರೆಲ್ಲರೂ ಕಡ್ಡಾಯವಾಗಿ ಜುಲೈ 1 ರಿಂದ ಮಕ್ಕಳಿಗೆ ಪಾಠ ಭೋದನೆ ನಿಲ್ಲಿಸಿ ಪ್ರತಿಭಟಿಸುತ್ತಿರುವದಾಗಿ ಸೋಮವಾರಪೇಟೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್. ಸತ್ಯನಾರಾಯಣ ತಿಳಿಸಿದರು.
ಜಿಲ್ಲಾ ಘಟಕಗಳು ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸುವದು. ಪ್ರತಿ ತಾಲೂಕಿನ ಎಲ್ಲಾ ಪದವೀಧರ ಶಿಕ್ಷಕರು ಪಾಠ ನಿಲ್ಲಿಸುವ ವಿಚಾರವನ್ನು ಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಮೂಲಕ ಶಿಕ್ಷಾಣಾಧಿಕಾರಿಗಳಿಗೆ ತಾ. 25 ರೂಳಗೆ ಪತ್ರ ಕಳುಹಿಸುವದು. ನಂತರ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸುವದು. ಹೀಗೆ ವಿವಿಧ ಹಂತಗಳಲ್ಲಿ ಕರ ಪತ್ರಗಳನ್ನು ಹಂಚುವ ಮೂಲಕ ಜುಲೈ 1 ರಿಂದ ಹೋರಾಟಕ್ಕೆ ಸಿದ್ಧತೆಯೊಂದಿಗೆ ಫ್ರಥಮ ಹಂತದ ಪ್ರತಿಭಟನೆಯನ್ನು ನಡೆಸಲಾಯಿತು.