ಚೆಟ್ಟಳ್ಳಿ, ಜೂ. 23: ವೀರಾಜಪೇಟೆ ಸಮೀಪದ ಕಡಂಗದ ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮದರಸದ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಾಂಗ ಮಾಡುತ್ತಿರುವ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಅಬೂಬಕರ್ ಕುವೈತ್ ಹಾಗೂ ಮುಜೀಬ್ ನೀಡಿರುವ ಪಠ್ಯಪುಸ್ತಕವನ್ನು ಜಮಾಹತ್ ಪ್ರತಿನಿಧಿಗಳು ವಿತರಣೆ ಮಾಡಿದರು.

ಈ ಸಂದರ್ಭ ಮದರಸ ಅಧ್ಯಾಪಕ ಹಾರಿಸ್ ಬಯಾನಿ ಜಮಾಹತ್ ಉಪಾಧ್ಯಕ್ಷರಾದ ಹಸೈನಾರ್, ಕುಂಞÂ ಅಹ್ಮದ್, ಟಿ.ಪಿ ಸಲಾಂ, ಪಿ.ಎ ಫಿರೋಜ್ ಅಧ್ಯಾಪಕ ರಜಾಕ್ ಉಸ್ತಾದ್ ಮತ್ತಿತರರು ಇದ್ದರು.