ನಾಪೆÉÇೀಕ್ಲು, ಜೂ. 23: ನಾಪೆÉÇೀಕ್ಲು ಪಟ್ಟಣದಿಂದ ಪಾರಾಣೆಗಾಗಿ ವಿರಾಜಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬೇತು ಗ್ರಾಮದ ಕುಟ್ಟಂಜ್ಜೆಟ್ಟಿರ ಮಂದ್ ಬಳಿಯಲ್ಲಿ ತೀರಾ ಹೊಂಡದಿಂದ ಕೂಡಿದ್ದು, ಮಳೆ ನೀರು ರಸ್ತೆಯಲ್ಲಿ ಸಂಗ್ರಹಗೊಂಡು ಪ್ರವಾಹದಂತೆ ಕಂಡು ಬರುತ್ತಿತ್ತು. ಈ ರಸ್ತೆಯಲ್ಲಿ ಲಘು ವಾಹನ ಮತ್ತು ದ್ವಿಚಕ್ರ ವಾಹನ ಸಾಗಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿತ್ತು.
ಈ ಸಮಸ್ಯೆಯನ್ನು ಅರಿತ ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಗ್ರಾಮಸ್ಥರಾದ ಗಂಗೆರ ಪಾಪು, ಪಾತಂಡ ಪುಟ್ಟ, ಗಿರೀಶ್, ಗಂಗೆರ ರಾಜ, ಅಪ್ಪೇರಿಯಂಡ ರಘು, ಪಾತಂಡ ಅಭಿಷೇಕ್ ಮತ್ತಿತರರ ಸಹಕಾರದೊಂದಿಗೆ ರಸ್ತೆ ಬದಿಯ ಚರಂಡಿಯನ್ನು ದುರಸ್ತಿಗೊಳಿಸಿ, ರಸ್ತೆಯಲ್ಲಿ ಸಂಗ್ರಹವಾದ ನೀರು ಖಾಲಿಯಾದ ನಂತರ ರಸ್ತೆಯಲ್ಲಿ ನಿರ್ಮಾಣಗೊಂಡ ಹೊಂಡಗಳನ್ನು ಮುಚ್ಚುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.