ಕೊಡಗು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದಾಗಿ ಬಾಕಿ ಉಳಿದಿರುವ ಸಾರ್ವಜನಿಕರ ಕಡತಗಳ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಆಯಾ ತಾಲೂಕು ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಡತಗಳ ಮಾಹಿತಿ ಲಭಿಸಲಿದೆ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ಹಾಗೂ ಇತರ ನಿರ್ಧಿಷ್ಟ ಕಾರಣಗಳಿಂದ ವಿಲೇವಾರಿಗೊಳ್ಳದೆ ಬಾಕಿ ಉಳಿದಿರುವ ಸಾಧ್ಯತೆ ಇದೆ. ಈ ಎಲ್ಲವನ್ನು ಪರಿಶೀಲಿಸಿ ಸಾರ್ವಜನಿಕ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಸಪ್ತಾಹದ ಕಡೆಯ ದಿನವಾದ ತಾ. 30 ರಂದು ಭಾನುವಾರ ಕೂಡ ಎಲ್ಲ ಕಂದಾಯ ಕಚೇರಿಗಳು ಸಾರ್ವಜನಿಕರಿಗೆ ತೆರೆದಿರುತ್ತದೆ.-ಅನೀಸ್ ಕಣ್ಮಣಿ ಜಾಯ್, ಜಿಲ್ಲಾಧಿಕಾರಿ