ಮಡಿಕೇರಿ, ಜೂ. 24: ಈ ಬಾರಿ ಪವಿತ್ರ ಹಜ್‍ಯಾತ್ರೆ ಕೈಗೊಂಡಿರುವವರಿಗೆ ಕೊಂಡಂಗೇರಿಯಲ್ಲಿರುವ ಕೊಡಗು ಜಿಲ್ಲಾ ಮುಸ್ಲಿಂ ಅನಾಥಾಲಯದಲ್ಲಿ ತಾ. 27 ರಂದು ಒಂದು ದಿನದ ತರಬೇತಿ ಶಬಿರ ಏರ್ಪಡಿಸಲಾಗಿದೆ.

ಅಂದು ಪೂರ್ವಾಹ್ನ 10 ಗಂಟೆಗೆ ಪ್ರಾರಂಭವಾಗುವ ಹಜ್ ತರಬೇತಿ ಶಿಬಿರದಲ್ಲಿ ಅಬ್ದುರ್ರಶೀದ್ ದಾರಿಮಿ ನೂಞÉೂೀರಿ ಅವರು ಹಜ್‍ನ ವಿಧಿವಿಧಾನಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಆ ಬಳಿಕ ಅನಾಥಾಲಯದ ಮಕ್ಕಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಜ್ ಯಾತ್ರಿಕರನ್ನು ಬೀಳ್ಕೊಡಲಾಗುವದು ಎಂದು ಅನಾಥಾಲಯದ ಪ್ರಾಂಶುಪಾಲ ಕೆ.ಎಸ್. ಶಾದುಲಿ ಫೈಝಿ ತಿಳಿಸಿದ್ದಾರೆ.