ಕೂಡಿಗೆ, ಜೂ. 21: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಉದ್ಭವ ಶ್ರೀ ನಾಗದೇವತಾ ಸಾನಿಧ್ಯದ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ವಿದ್ವಾನ್ ಶ್ರೀ ಸ್ವಾಮಿನಾಥನ್ ಇವರ ಉಪಸ್ಥಿತಿಯಲ್ಲಿ ವೇ.ಮೂ. ಸತೀಶ್ ಶರ್ಮಾ ನೇತೃತ್ವದಲ್ಲಿ ಪ್ರತಿಷ್ಠಾಪನೆ ಪೂಜಾ ಕೈಂಕರ್ಯ ನಡೆಯಿತು.