ಮಡಿಕೇರಿ, ಜೂ. 20: ತಾ. 26 ಹಾಗೂ 27ರಂದು ವೀರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಅನುದಾನ ರಹಿತ ಪ್ರೌಢಶಾಲೆಯ ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರದ ಶಿಕ್ಷಕರಿಗೆ ಎರಡು ದಿನಗಳ ತಾಲೂಕು ಮಟ್ಟದ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ರಾಜ್ಯಮಟ್ಟದ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ನಡೆಯುವ ಕಾರ್ಯಾಗಾರದ ಉಪಯೋಗವನ್ನು ಸಂಬಂಧಪಟ್ಟ ಶಿಕ್ಷಕರು ಪಡೆದುಕೊಳ್ಳಬೇಕಾಗಿ ಕೋರಿದ್ದಾರೆ.