ಮಡಿಕೇರಿ, ಜೂ. 20: ಹೊಸೂರು ಗ್ರಾಮ ಪಂಚಾಯಿತಿಯ ವಾರ್ಡ್-1 ರ ಸಭೆ ತಾ. 25 ರಂದು ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್ ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆಯಲ್ಲಿ ವಾರ್ಡ್-2 ಮತ್ತು 3 ರ ಸಭೆ ತಾ. 24 ರಂದು ಅಪರಾಹ್ನ 4 ಗಂಟೆಗೆ ದುಬಾರೆ ತಮಿಳು ಶಾಲೆಯಲ್ಲಿ ವಾರ್ಡ್ ಅಧ್ಯಕ್ಷ ಹೆಚ್.ಆರ್. ನರಸಿಂಹ ಹಾಗೂ ಎಸ್.ಎ. ರತ್ನಸುಬ್ಬಯ್ಯ ಅಧ್ಯಕ್ಷತೆಯಲ್ಲಿ ವಾರ್ಡ್-4 ರ ಸಭೆ ತಾ. 24 ರಂದು ಬೆಳಿಗ್ಗೆ 11 ಗಂಟೆಗೆ ಕಳತ್ಮಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಅಧ್ಯಕ್ಷೆ ಪಿ.ಎಂ. ಶಾರದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹೊಸೂರು ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಗ್ರಾಮ ಸಭೆಯನ್ನು ಜು. 1 ರಂದು ಪೂರ್ವಾಹ್ನ 11 ಗಂಟೆಗೆ ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.