ಮಡಿಕೇರಿ, ಜೂ. 19: 2019ನೇ ಸಾಲಿನ ರಂಗನಿರ್ದೇಶಕ ದಿ:ಸಿ.ಜಿ. ಕೃಷ್ಣಸ್ವಾಮಿ ಹೆಸರಿನ ಪ್ರತಿಷ್ಟಿತ ರಂಗಪುರಸ್ಕಾರ ಈ ಬಾರಿ ಜಿಲ್ಲೆಯ ರಂಗನಟ ತೆನ್ನಿರ ರಮೇಶ್‍ಗೆ ದೊರೆತಿದೆ.

ರಾಜ್ಯದ ಪ್ರತಿಜಿಲ್ಲೆಯಿಂದ ಒಬ್ಬರಿಗೆ ಈ ರಂಗಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಬೆಂಗಳೂರು ಬೀದಿ ನಾಟಕ ಅಕಾಡೆಮಿ ವತಿಯಿಂದ ಈ ಪುರಸ್ಕಾರ ನೀಡುತ್ತಾ ಬಂದಿದೆ. ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಈ ಬಾರಿ ರಮೇಶ್ ಹೆಸರನ್ನು ಶಿಫಾರಸ್ಸು ಮಾಡಿದ್ದರು. ತೆನ್ನಿರ ರಮೇಶ್ 80ರ ದಶಕದಲ್ಲಿ ಸೃಷ್ಟಿ ಸಂಸ್ಥೆಯ ‘ಕಳ್ಳ್’ ಎಂಬ ಕೊಡವ ನಾಟಕದಲ್ಲಿ ಇನ್ಸ್‍ಪೆಕ್ಟರ್ ಪಾತ್ರದಲ್ಲಿ 50ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟಿಸಿದ್ದರು. ಅಲ್ಲದೆ, ಕಾರ್ಯಪ್ಪ ನಿರ್ದೇಶನದ ‘ವ್ಯವಸ್ಥೆ’ ಕನ್ನಡ ನಾಟಕವಲ್ಲದೆ, ಸೃಷ್ಟಿ ಕೊಡಗು ರಂಗ ರೆಪರ್ಟರಿಯಲ್ಲಿ ನೀಲಿಕುದುರೆ, ಪೆರ್ಚೋಳಿಯ ಮತ್ತು ದಿವಾನ್ ಬೋಪಣ ್ಣಕೊಡವ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದಿವಾನ್ ಬೋಪಣ್ಣ ನಾಟಕದ ‘ಚಿಕವೀರರಾಜೇಂದ್ರ’ ಪಾತ್ರ ಜನಪ್ರಿಯವಾಗಿತ್ತು.

ಸಂಸ್ಥೆಯಲಿ ್ಲ ಜಾನಪದ ಕಲಾವಿದರಾಗಿ ರಾಜ್ಯದ ಅನೇಕ ಕಡೆ ಬೊಳಕಾಟ್ ನೃತ್ಯತಂಡದಲ್ಲಿ ಭಾಗವಹಿಸಿದ ಅನುಭವ ಇವರದು. ತೆನ್ನಿರ ರಮೇಶ್‍ರ ಹತ್ತಾರು ವರ್ಷಗಳ ರಂಗಸೇವೆಯನ್ನು ಪರಿಗಣಿಸಿ 2019ನೇ ಸಾಲಿನ ರಂಗಪುರಸ್ಕಾರ ನೀಡಲಾಗಿದೆ.