ಮಡಿಕೇರಿ, ಜೂ. 19: ಮಂಗಳೂರು ವಿಶ್ವವಿದ್ಯಾನಿಲಯದ ಏಪ್ರಿಲ್/ ಮೇ 2019ರಲ್ಲಿ ನಡೆದ ಎಲ್ಲಾ ಪದವಿ ಪರೀಕ್ಷೆಗಳ ಫಲಿತಾಂಶಗಳನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್‍ನಲ್ಲಿ (ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿ) ಪ್ರಕಟಿಸಲಾಗಿದೆ. ಮರು ಮೌಲ್ಯಮಾಪನ / ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಅರ್ಜಿಯನ್ನು ತಾ. 29ರೊಳಗಾಗಿ ಫಲಿತಾಂಶದ ವೆಬ್‍ಸೈಟ್ ಪ್ರತಿಯೊಂದಿಗೆ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ವಿ.ವಿ/ ಪ್ರಕಟಣೆ ತಿಳಿಸಿದೆ.