ನಾಪೆÇೀಕ್ಲು, ಜೂ. 17: ಕಳೆದ ಕೆಲವು ದಿನಗಳಿಂದ ಇಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ತಾ. 12 ರಂದು ಸೆಸ್ಕ್ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಸಮಸ್ಯೆಯನ್ನು ಪರಿಹರಿಸದಿದ್ದರೆ ಇಂದು ಪ್ರತಿಭಟನೆ ನಡೆಸಲಾಗುವದು ಎಂದು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದರು.
ಗಡುವು ನೀಡಿದ ಹಿನ್ನೆಲೆಯಲ್ಲಿ ಇಂದು ಮೂರ್ನಾಡಿನ ಸೆಸ್ಕ್ ಸಹಾಯಕ ಅಭಿಯಂತರ ದೇವಯ್ಯ ನಾಪೆÇೀಕ್ಲು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಅವಹಾಲು ಕೇಳಿದರು. ಈ ವಿಭಾಗದಲ್ಲಿ ಮಳೆಯಿಂದ ಮರಗಿಡಗಳು ಬಿದ್ದು ತೊಂದರೆಯಾಗಿರುವದರಿಂದ ಸಮಸ್ಯೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಪರಿಹಾರವನ್ನು ಕಂಡು ಕೊಳ್ಳಲು ಎಕ್ಸ್‍ಪ್ರೇಸ್ ವೇ ಮೂಲಕ ಕರೆಂಟ್ ನೀಡಲು ಮೂರುದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದರು. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು. ಇದು ಗುಡ್ಡಗಾಡು ಪ್ರದೇಶವಾಗಿರುವದರಿಂದ ಜಿ.ಓ.ಎಸ್. ತಂತ್ರಜ್ಞಾನವನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವದು ಎಂದ ಅವರು, ಮುಂದೆ ನಾಪೆÉÇೀಕ್ಲು ನಗರದಲ್ಲಿ ವಿದ್ಯುತ್ ವಿತರಣಾ ಘಟಕ ಸ್ಥಾಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಮಸ್ಯೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.
ಈ ಸಂದರ್ಭ ಹೋಬಳಿ ಬಿ.ಜೆ.ಪಿ. ಅಧ್ಯಕ್ಷ ಅಂಬಿ ಕಾರ್ಯಪ್ಪ, ಪ್ರಮುಖರಾದ ರಮೇಶ್ ಮುದ್ದಯ್ಯ. ಮನು ಮಹೇಶ್. ಜಾಲಿ ಪೂವಪ್ಪ, ಕರವಂಡ ಅಪ್ಪಣ್ಣ, ಕುಂಡ್ಯೊಳಂಡ ಪೂವಯ್ಯ, ಬಿದ್ದಾಟಂಡ ಜಿನ್ನು ನಾಣಯ್ಯ, ಉದಯ ಶಂಕರ್. ಕಿಶೋರ್, ಬಿ.ಎಂ. ಪ್ರತೀಪ್, ಚೋಕಿರ ಅಶೋಕ, ಚೋಕಿರ ಸಜೀತ್, ಅರೆಯಡ ಸೋಮಪ್ಪ, ಮತ್ತಿತರರು ಇದ್ದರು.
-ದುಗ್ಗಳ