ಸೋಮವಾರಪೇಟೆ,ಜೂ.17: ಐಗೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಎ.ಸುಮಿತ್ರ ಎಸ್.ಎಸ್.ಎಲ್.ಸಿ.ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಐದು ಹೆಚ್ಚುವರಿ ಅಂಕಗಳನ್ನು ಪಡೆದು ತಾಲೂಕಿನ ಸರಕಾರಿ ಶಾಲೆಗಳ ಪೈಕಿ ಅತೀ ಹೆಚ್ಚಿನ ಅಂಕ ಪಡೆದ ಗೌರವಕ್ಕೆ ಪಾತ್ರಳಾಗಿದ್ದಾಳೆ.

ಈ ಹಿಂದೆ 589 ಅಂಕ ಪಡೆದಿದ್ದ ಸುಮಿತ್ರ ವಿಜ್ಞಾನ ಉತ್ತರ ಪತ್ರಿಕೆಯನ್ನು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, 88 ಅಂಕಕ್ಕೆ ಬದಲಾಗಿ 93 ಅಂಕ ಪಡೆದಿದ್ದಾಳೆ. ಒಟ್ಟು 594 ಅಂಕಗಳನ್ನು ಪಡೆಯುವ ಮೂಲಕ ಶೇಕಡ 95.04% ಅಂಕಗಳನ್ನು ಪಡೆದಿದ್ದಾಳೆ.