ಮಡಿಕೇರಿ, ಜೂ. 18: ಮೂರ್ನಾಡು ಬಲಮುರಿ ನಿವಾಸಿ ಪಾಲಂದಿರ ಮುತ್ತಣ್ಣ ಮತ್ತು ಮಿಥುನ ದಂಪತಿಗಳ ಪುತ್ರಿ ವಿಚಲ್ ಮುತ್ತಣ್ಣ ಅವರಿಗೆ ಅಮೇರಿಕಾದ ಪ್ರತಿಷ್ಠಿತ ಮೆಡಿಕಲ್ ಡಿಸೈನ್ ಎಕ್ಸಲೆನ್ಸ್ ಅವಾರ್ಡ್-2019 ಲಭಿಸಿದೆ. ಅಲ್ಲಿ ನಡೆದ ವೈದ್ಯಕೀಯ ನೂತನ ತಂತ್ರಜ್ಞಾನದ ಅನ್ವೇಷಣಾ ಸ್ಪರ್ಧೆಯಲ್ಲಿ ಇವರ ತಂಡ ಮೂರನೇ ಸ್ಥಾನ ಪಡೆದುಕೊಂಡಿತು.

ವಯೋವೃದ್ಧ ಕುರುಡುತನಕ್ಕೆ ಸಂಬಂಧಿಸಿದಂತೆ ವಿಚಲ್ ತಂಡ ಸಾಧನ ಒಂದನ್ನು ಕಂಡುಹಿಡಿದಿದ್ದು, ಇದುವರೆಗೂ ಈ ಕಾಯಿಲೆಗೆ ಯಾವದೇ ಸಾಧನ ಪ್ರಪಂಚದಾದ್ಯಂತ ಸೃಷ್ಟಿ ಆಗಿಲ್ಲವೆನ್ನಲಾಗಿದೆ. ಇದೇ ತಾ. 11 ರಂದು ನ್ಯುಯಾರ್ಕ್‍ನಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು.