ಶನಿವಾರಸಂತೆ, ಜೂ. 18: 16,200 ಕೆ.ಜಿ. ಗಿಂತ ಹೆಚ್ಚಿನ ಭಾರವುಳ್ಳ ಮರ ಮತ್ತು ಮರಳು ಸರಕು ಸಾಗಣೆ ಮಾಡುವ ವಾಹನಗಳನ್ನು ಕೊಡಗು ಜಿಲ್ಲಾಧಿಕಾರಿಯವರು ತಾ. 12. 6.2019 ರಿಂದ 8.8.2019ರವರೆಗೆ ಕೊಡಗು ಜಿಲ್ಲೆಯಾದ್ಯಂತ ನಿರ್ಬಂಧ ವಿಧಿಸಿ ಆದೇಶ ಜಾರಿ ಮಾಡಿರುತ್ತಾರೆ.
ಈ ಆದೇಶ ಜಾರಿಯಲ್ಲಿದ್ದರೂ ನಿನ್ನೆ ಬೆಳಿಗ್ಗೆ (ಕೆ.ಎ. 05 ಎ.ಎ. 5076) ಲಾರಿಯಲ್ಲಿ ಕಟ್ಟಿಗೆಗಳ ತುಂಡುಗಳನ್ನು ತುಂಬಿಸಿಕೊಂಡು ಬೆಟ್ಟದಪುರಕ್ಕೆ ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿಯ ಮೇರೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಹಾಯಕ ಠಾಣಾಧಿಕಾರಿ ಶಿವಲಿಂಗ, ಸಿಬ್ಬಂದಿ ರಘು ಅವರುಗಳು ಬ್ಯಾಡಗೊಟ್ಟ ಗ್ರಾಮದ ಮುಖ್ಯರಸ್ತೆ ಯಲ್ಲಿ ತಡೆದು ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಲಾರಿಯ ತೂಕ ಮಾಡಿಸಲಾಗಿ 19,300 ಕೆ.ಜಿ. ಭಾರವಿ ರುವದು ಕಂಡು ಬಂದುದ ರಿಂದ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಯಾಗಿರುವದರಿಂದ ಲಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆಯ ಮೇರೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆಯೋಗ ಕಾನೂನಿನಂತೆ ಈ ಲಾರಿಗೆ ರೂ. 7,900 ದಂಡ ವಿಧಿಸಲಾಗಿದೆ.