ನಗರಸಭೆಗೆ 4 ಲಕ್ಷ ಲಾಭ
ಮಡಿಕೇರಿ, ಜೂ. 18: ಇಂದು ನಡೆದ ಮಡಿಕೇರಿ ನಗರಸಭೆ ವ್ಯಾಪ್ತಿಯ ಮೀನು ಹಾಗೂ ಮಾಂಸಗಳ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ನಗರಸಭೆಗೆ ಸುಮಾರು 4 ಲಕ್ಷ ಲಾಭ ಬಂದಿದೆ.
ಮಾರುಕಟ್ಟೆ ಆವರಣದಲ್ಲಿರುವ ಐದು ಹಸಿಮೀನು ಮಳಿಗೆಗಳು ರೂ. 7,51,500 ರೂ.ಗಳಿಗೆ ಹರಾಜಾಗಿದೆ. ಐದು ಕೋಳಿ ಮಾಂಸದ ಮಳಿಗೆಗಳು ರೂ. 5,80,000 ರೂ.ಗಳಿಗೆ ಹಾಗೂ ಎರಡು ಕುರಿ ಮಾಂಸದ ಮಳಿಗೆಗಳು ರೂ. 1,69,500 ರೂ.ಗಳಿಗೆ ಹರಾಜಾಗಿದ್ದು, ಒಟ್ಟಾರೆ ನಾಲ್ಕು ಲಕ್ಷ ರೂ. ಲಾಭ ಲಭಿಸಿದೆ. ಕಳೆದ ಬಾರಿ ಮಳೆ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ನಡೆದಿರಲಿಲ್ಲ.