ಚೆಟ್ಟಳ್ಳಿ, ಜೂ. 17: ವೀರಾಜಪೇಟೆ ಪಟ್ಟಣದ ವೈನ್ ಶಾಪ್‍ನಲ್ಲಿ ಕೆಲಸ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನನ್ನು ರಕ್ಷಿಸಿ, ಬಾಲಕನ ರಕ್ಷಣೆ ಹಾಗೂ ಪೋಷಣೆಯ ಉದ್ದೇಶದಿಂದ ಮಡಿಕೇರಿಯಲ್ಲಿರುವ ಸರ್ಕಾರಿ ಬಾಲಕರ ಮಂದಿರಕ್ಕೆ ಸೇರಿಸಲಾಗಿದೆ.
ಪೋಷಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು.
ತಪ್ಪಿತಸ್ತ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಆರ್. ಶೀರಾಝ್ ಅಹ್ಮದ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಂಗಡಿ, ತೋಟಗಳಲ್ಲಿ ಮಕ್ಕಳನ್ನು ದುಡಿಸುವದು ಕಂಡು ಬಂದರೆ ಕೂಡಲೇ ಸಾರ್ವಜನಿಕರು ಹಿಂಜರಿಯದೆ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ಕೋರಿದ್ದಾರೆ.
ಕಾರ್ಯಾಚರಣೆ ಸಂದರ್ಭ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧೀಕ್ಷಕಿ ಸುಮತಿ, ಮಕ್ಕಳ ಸಹಾಯವಾಣಿ ತಂಡದ ಸದಸ್ಯರುಗಳಾದ ಕುಸುಮ, ಯೋಗೇಶ್, ಹಾಗೂ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ಕಿರಣ್ ಇದ್ದರು.