ಗೋಣಿಕೊಪ್ಪ ವರದಿ, ಜೂ. 17: ಸಭೆಗೆ ಹಾಜರಾಗದ ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ನಿರ್ಧಾರವನ್ನು ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ವೀರಾಜಪೇಟೆ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರುಗಳು; ತಹಶೀಲ್ದಾರ್ ಗೋವಿಂದರಾಜು ಸಭೆಗೆ ಬಾರದೆ ನಿರ್ಲಕ್ಷ್ಯ ಮಾಡುತ್ತಿರುವದನ್ನು ಖಂಡಿಸಿದರು. ಈ ಬಗ್ಗೆ ತಾಲೂಕು ಪಂಚಾಯ್ತಿ ಸದಸ್ಯರುಗಳು ನಿಯೋಗ ತೆರಳಿ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಒತ್ತಾಯಿಸಲು ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡರು. ತಹಶೀಲ್ದಾರ್ ಸಭೆಗೆ ಬರಬಾರದು ಎಂಬ ನಿಯಮ ಇಲ್ಲ. ಆದರೂ ಸದಸ್ಯರುಗಳು; ತಹಶೀಲ್ದಾರ್ ಗೋವಿಂದರಾಜು ಸಭೆಗೆ ಬಾರದೆ ನಿರ್ಲಕ್ಷ್ಯ ಮಾಡುತ್ತಿರುವದನ್ನು ಖಂಡಿಸಿದರು. ಈ ಬಗ್ಗೆ ತಾಲೂಕು ಪಂಚಾಯ್ತಿ ಸದಸ್ಯರುಗಳು ನಿಯೋಗ ತೆರಳಿ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಒತ್ತಾಯಿಸಲು ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡರು.

ತಹಶೀಲ್ದಾರ್ ಸಭೆಗೆ ಬರಬಾರದು ಎಂಬ ನಿಯಮ ಇಲ್ಲ. ಆದರೂ (ಮೊದಲ ಪುಟದಿಂದ) ಎಂದು ಅಧಿಕಾರಿ ಜಯಣ್ಣ ಮಾಹಿತಿ ನೀಡಿದರು. ತಹಶೀಲ್ದಾರ್ ಅವರಿಗೆ ಕಾಯ್ದಿರಿಸಿರುವ ಜಾಗದಲ್ಲಿರುವ ನಾಮಫಲಕವನ್ನು ಕೂಡ ತೆರವುಗೊಳಿಸಬೆಕು. ಅವರು ಆ ಸ್ಥಾನದ ಗೌರವ ಕಾಪಾಡಿಕೊಳ್ಳುತ್ತಿಲ್ಲ ಎಂದು ಸದಸ್ಯರು ಆಕ್ರೋಶದಿಂದ ನುಡಿದರು.

ತಹಶೀಲ್ದಾರ್ ಲಂಚ ಕೇಳುವದರಿಂದ ಶಾಲಾ ಅಭಿವೃಧ್ಧಿ ಸಮಿತಿ ಸದಸ್ಯರಿಗೆ ತೊಂದರೆ ಯಾಗುತ್ತಿದೆ ಎಂದು ಆರೋಪಿಸಿದ ತಾ. ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳ ಭೂದಾಖಲೆಯನ್ನು ಶಾಲೆಯ ಹೆಸರಿಗೆ ಮರುದಾಖಲಿಸುವ ಕಾರ್ಯ ನಡೆಯಬೇಕಿದೆ. ಸುಮಾರು 26 ಶಾಲೆಗಳ ಭೂದಾಖಲೆ ಶಾಲೆ ಹೆಸರಿಗೆ ದಾಖಲಾಗಬೇಕಿದೆ. ಈ ಬಗ್ಗೆ ತಹಶೀಲ್ದಾರ್ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣ ಗೊಂಡಿದ್ದರೂ; ವಿವಿಧ ಕಾಮಗಾರಿಗಳ ರೂ. 2.4 ಲಕ್ಷ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿರುವದರಿಂದ ಮೊದಲು ಹಣ ಖರ್ಚು ಮಾಡಿದ ಗುತ್ತಿಗೆದಾರರ ಆರ್ಥಿಕ ಸ್ಥಿತಿಗೆ ತೊಡಕಾಗಿದೆ. ಅನುದಾನ ಕೂಡ ಇಲಾಖೆ ನಿರ್ಲಕ್ಷದಿಂದ ವಾಪಸ್ ಹೋಗಿರುವದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಗುತ್ತಿಗೆದಾರರು ಕಾಮಗಾರಿ ಗುತ್ತಿಗೆ ಪಡೆಯಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಜಾತಿ ಪ್ರಮಾಣಪತ್ರ ಪಡೆಯಲು ವಿಳಂಭವಾಗುತ್ತಿರುವದರಿಂದ ತಾಲೂಕಿನಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ಸವಲತ್ತು ನೀಡುವ ಶಾಲೆ ಸೇರಲು ಆಗುತ್ತಿಲ್ಲ. ಅನಾವಶ್ಯಕ ಮನೆಯಲ್ಲಿಯೇ ದಿನ ಕಳೆಯುವಂತಾಗಿದೆ ಎಂದು ಸದಸ್ಯರಾದ ಪಲ್ವಿನ್ ಪೂಣಚ್ಚ ಹಾಗೂ ಪ್ರಕಾಶ್ ಗಮನ ಸೆಳೆದರು. ಪ್ರಮಾಣಪತ್ರ ದೊರೆಯುವವರೆಗೂ ಹಾಜರಾತಿಗೆ ಶಾಲೆಗಳಲ್ಲಿ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಆಯಾ ಇಲಾಖೆವಾರು ನಡೆಯುವ ಕಾಮಗಾರಿಗಳ ಗುತ್ತಿಗೆದಾರರನ್ನು ತಾಲೂಕು ಪಂಚಾಯ್ತಿ ಅಧಿಕಾರಿಗಳು ಕಚೇರಿಗೆ ಕರೆಸಿಕೊಳ್ಳುತ್ತಿರುವದರಿಂದ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ ಎಂದು ನೆಲ್ಲಿರ ಚಲನ್ ಆರೋಪಿಸಿದರು. ಆಯಾ ಇಲಾಖೆ ಮೂಲಕ ಅವರು ವ್ಯವಹರಿಸಿಕೊಳ್ಳಲಿ, ತಾಲೂಕು ಕಚೇರಿ ಸಿಬ್ಬಂದಿ ಮದ್ಯಪ್ರವೇಶ ಮಾಡುವದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೊಂದರೆಯಾಗುತ್ತಿರುವದು ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಲಿದೆ ಎಂದರು.

ತಾಲೂಕಿನಲ್ಲಿ ಸುಮಾರು 36 ಮುಖ್ಯರಸ್ತೆ ಕಾಮಗಾರಿಗಳಿಗೆ ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ನಡೆಸಲಾಗುವದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಮಳೆ ಪ್ರಾರಂಭಕ್ಕೂ ಮೊದಲೇ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಸಮರ್ಪಕವಾಗಿ ಕಂಬಗಳನ್ನು ಹಾಗೂ ಸಲಕರಣೆಗಳನ್ನು ಶೇಖರಿಸಿಕೊಂಡು ವಿದ್ಯುತ್ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಸದಸ್ಯ ಗಣೇಶ್ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಸೂಚಿಸಿದರು.

ಶಾಲೆಗಳಿಗೆ ಧಾನ ನೀಡಿದ ಸ್ಥಳಗಳನ್ನು ಸರ್ಕಾರಿ ಆರ್.ಟಿ.ಸಿ.ಗಳಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೆ ಕೆಲವೊಂದು ಶಾಲೆಗಳ ಆರ್.ಟಿ.ಸಿಗಳು ಪಡೆಯಲು ಕಂದಾಯ ಇಲಾಖೆಯಲ್ಲಿ ವಿಳಂಬವಾಗುತ್ತಿದೆ ಎಂದು ಇಲಾಖೆಯ ಅಧಿಕಾರಿ ಉತ್ತಪ್ಪ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ತಹಶೀಲ್ದಾರ್‍ರವರಿಗೆ ಎಸ್.ಡಿ.ಎಂ.ಸಿ. ವತಿಯಿಂದ ಹಣ ಸಂಗ್ರಹಿಸಿ ನೀಡಿದರೆ ಜಾಗಗಳು ಸರ್ಕಾರಿ ಆರ್.ಟಿ.ಸಿಗೆ ವರ್ಗಾವಣೆ ಆಗುತ್ತದೆ ಎಂದು ಹೇಳಿದರು. ಶಾಲೆ ಬಿಟ್ಟ 115 ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಸರ್ಕಾರದ ಆದೇಶ ಬಂದ ನಂತರ ಮುಂದಿನ ಕೆಲ ದಿನಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವದು ಎಂದು ತಿಳಿಸಿದರು.

ರೈತರಿಗೆ ಬೆಳೆಯಲು ಸೂಕ್ತವಾದ ಭತ್ತದ ಬೀಜಗಳನ್ನು ವಿತರಿಸಲು ಕೃಷಿ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಕೃಷಿ ಅಧಿಕಾರಿಗೆ ಸಭೆ ಸೂಚಿಸಿತು. ಇದಕ್ಕೆ ಉತ್ತರ ನೀಡಿದ ಅಧಿಕಾರಿ ರೈತರಿಗೆ ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ಖರೀದಿಸಲಾಗಿದೆ. ತುಂಗ, ತನು, ಇಂಟಾನ್, ಬಿ.ಆರ್. ಭತ್ತದ ಬೀಜಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಬೇಡಿಕೆ ಇರುವ ಕಾಳು ಮೆಣಸು, ಲಿಚ್ಚಿ, ಬೆಣ್ಣೆ ಹಣ್ಣು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗೆ ಸಭೆ ಸೂಚಿಸಿತು.

ಸದಸ್ಯ ಗಣೇಶ್ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಸೂಚಿಸಿದರು.

ಹದಗೆಟ್ಟಿರುವದರಿಂದ ತೊಂದರೆ ಯಾಗಿದೆ ಎಂದು ಸದಸ್ಯ ಅಜಿತ್ ಕರುಂಬಯ್ಯ ಹೇಳಿದರು.

ಇಲಾಖೆಗಳ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸಬ್ಸಿಡಿ ಮೂಲಕ ಉಚಿತವಾಗಿ ನೀಡುವ ವಸ್ತುಗಳು ಫಲಾನುಭವಿಗಳಿಗೆ ಲಭಿಸದೆ ತೊಂದರೆಯಾಗುತ್ತಿದೆ. ಸಾಮಾಜಿಕ ಅರಣ್ಯ ಇಲಾಖೆ ಮೂಲಕ ವಿತರಣೆ ಮಾಡಿರುವ ಸೋಲಾರ್ ಲ್ಯಾಂಪ್ ಉರಿಯದೇ ಇರುವದರಿಂದ ಫಲಾನುಭವಿಗಳು ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಮತ್ತೆ ಕುಕ್ಕರ್ ವಿತರಣೆ ಮಾಡುವ ಮೂಲಕ ಸದಸ್ಯರುಗಳಿಗೆ ತೊಂದರೆ ನೀಡಬೇಡಿ. ಕಂಪೆನಿಗಳು ಸಬ್ಸಿಡಿ ಮೂಲಕ ನೀಡುವ ವಸ್ತುಗಳನ್ನು ಬೇರೆ ಜಾಗದಲ್ಲಿ ಪ್ರತ್ಯೇಕವಾಗಿ ತಯಾರಿ ಮಾಡುತ್ತಿದೆ. ಇದರಿಂದ ಕಳಪೆ ವಸ್ತು ಫಲಾನುಭವಿಗಳ ಕೈಸೇರುವಂತಾಗಿದೆ ಎಂದು ಅಜಿತ್ ಆರೋಪಿಸಿದರು.

ನಿವೇಶನ ರಹಿತರಿಗೆ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳ ಲಾಯಿತು. ಒಂದಷ್ಟು ಜನರು ನಿವೇಶನ ರಹಿತರು ಎಂದು ಹೇಳಿಕೊಂಡು ಕೆದಮುಳ್ಳೂರು ವ್ಯಾಪ್ತಿಯಲ್ಲಿ ಸೇರಿಕೊಂಡಿದ್ದಾರೆ. ಮಳೆಗಾಲದಲ್ಲಿ ಇವರಿಗೆ ತೊಂದರೆಯಾದರೆ ಯಾರು ಹೊಣೆ. ಇವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಸದಸ್ಯ ಮಾಳೇಟೀರ ಪ್ರಶಾಂತ್ ಒತ್ತಾಯಿಸಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆನ್ನಿಸ್, ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

-ಸುದ್ದಿಪುತ್ರ / ದಿನೇಶ್.