ಮಡಿಕೇರಿ, ಜೂ.17 : ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರಮಮತೆಯ ತೊಟ್ಟಿಲುಯೋಜನೆಯನ್ನು ಜಾರಿಗೆ ತಂದಿದೆ. ಮಡಿಕೇರಿಯಲ್ಲೂ "ಮಮತೆಯ ತೊಟ್ಟಿಲು" ಕೇಂದ್ರವನ್ನು ಸ್ಥಾಪಿಸಲಾಗಿದ್ದು. ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ನಿರ್ಲಿಕ್ಷಲ್ಸ್ಪಡುವ ನವಜಾತ ಶಿಶುಗಳ್ಳನ್ನು ರಕ್ಷಣೆ ಮಾಡಿ ಉತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಮಕ್ಕಳ ಅಭಿವೃದ್ಧಿ ಇಲಾಖೆ ಕೇಂದ್ರವನ್ನು ಆರಂಭಿಸಲು ಮುಂದಾಗಿದೆ.ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಸುಮಾರು .೬೦ ಲಕ್ಷ ರೂ . ವೆಚ್ಚದಲ್ಲಿ "ಮಮತೆಯ ತೊಟ್ಟಿಲು" ಕೇಂದ್ರದ ನಿರ್ಮಾಣಗೊಂಡಿದೆ. ಹೆತ್ತವರಿಂದ ತೇಜಿಸಲ್ಪಟ್ಟ ಅನಾಥ ಮಗುವಿಗೆ ಸುರಕ್ಷಿತ ಆಶ್ರಯ ವದಗಿಸುವ ಮೂಲಕ ಶಿಶು ಮರಣ ಪ್ರಮಾಣ ಕುಗ್ಗಿಸುವ ಉದ್ದೇಶದಿಂದ ಹಾಗು ಮಗುವಿನ ಬದುಕು ಬರಡಾಗಬಾರದು ಎಂಬ ಆಶ್ರಯದೊಂದಿಗೆ ಯೋಜನೆ ಜಾರಿಯಲ್ಲಿದೆ. ಅಸಹಜ ಕಾರಣಕ್ಕೆ ಜನಿಸಿದ ಮಗುವನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವ ಪ್ರಕರಣಗಳು ಕಂಡು ಬರುತಿದೆ. ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ, ಪೊಧೆಗಳು ಸೇರಿದಂತೆ ಇನಿತರ ಪ್ರದೇಶಗಳ್ಳಲ್ಲಿ ನವಜಾತ ಶಿಶುಗಳ್ಳನ್ನುಬಿಟ್ಟು ಹೋಗಲಾಗುತ್ತಿದೆ. ಎಳೆಯ ಜೀವನಗಳ್ಳನ್ನು ಬೀದಿ ನಾಯಿ, ವಿಷ ಜಂತುಗಳಿಗೆ ಬಳಿ ನೀಡುವ ಬದಲು "ಮಮತೆಯ ತೊಟ್ಟಿಲಿನಲ್ಲಿ " ಬಿಡಿ ಭವಿಷ್ಯದ ಕುಡಿಯ ಭವಿಷ್ಯವನ್ನು ಹಸನಗೊಳಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಅಭಿಪ್ರಾಯಪಡುತಾರೆ. ಕೊಠಡಿಯ ಒಳಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಮಮತೆಯ ತೊಟ್ಟಿಲಿನಲ್ಲಿ ಶಿಶುವನ್ನು ಇಟ್ಟು ಹೋದವರ ಕುರಿತು ಗೌಪ್ಯತೆ ಕಾಪಾಡಲಾಗುವದು ಅಲ್ಲದೇ, ಯಾವುದೇ ಸಿ.ಸಿ.ಟಿ.ವಿ ಕ್ಯಾಮರಾ ಪ್ರದೇಶದಲ್ಲಿ ಅಳವಡಿಸಲಾಗುವದಿಲ್ಲ.ಅತ್ಯಾಧುನಿಕ ವಿನ್ಯಾಸದ ತೊಟ್ಟಿಲು ಇದಾಗಿದ್ದು, ಸ್ವಯಂ ಚಾಲಿತ ಬಾಗಿಲು, ಮಗುವಿನ ರಕ್ಷಣೆಗೆ ಪೂರಕವಾದ ತಾಪಮಾನದ ನಿಯಂತ್ರಣಾ ವ್ಯವಸ್ಥೆ ಇಲ್ಲಿದೆ. ಮಗುವಿನ ಇರುವಿಕೆಯನ್ನು ಗುರುತಿಸಲು ಸೆನ್ಸಾರ್ ಅಳವಡಿಸಲಾಗಿದೆ. ಅಲರಾಂ ಮತ್ತು ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡುವ ತಂತ್ರಜ್ಞಾನ ಹೊಂದಿದೆ.