ಸೋಮವಾರಪೇಟೆ,ಜೂ.18: ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಆಟೋ ಸೇರಿದಂತೆ 4 ಬೈಕ್‍ಗಳ ಸಹಿತ ಪಣಕ್ಕಿಟ್ಟಿದ್ದ ರೂ. 1,420 ನಗದನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣ ಸಮೀಪದ ತಣ್ಣೀರುಹಳ್ಳ ಗ್ರಾಮದ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ನಿರತರಾಗಿದ್ದ ಅದೇ ಗ್ರಾಮದ ಸಂದೀಪ್, ಪ್ರವೀಣ್, ರಾಮಚಂದ್ರ, ನಾರಾಯಣ, ಕರಿಯಪ್ಪ, ವಿಜಯ್ ವೇಗಸ್, ಚಂದ್ರಹಾಸ್ ಮತ್ತು ಮನು ಅವರುಗಳನ್ನು ವಶಕ್ಕೆ ಪಡೆದಿದ್ದು, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್‍ರಾಜ್, ಸಿಬ್ಬಂದಿಗಳಾದ ಜಗದೀಶ್, ಪ್ರವೀಣ್, ಕೇಶವ, ಶಿವಕುಮಾರ್, ನವೀನ್ ಅವರುಗಳು ಭಾಗವಹಿಸಿದ್ದರು.