ಶ್ರೀಮಂಗಲ, ಜೂ. 17: ಪೆÇನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳಿಗೆ ಉತ್ತರ ಪಡೆದರು.

ನ್ಯಾಯಮೂರ್ತಿಗಳನ್ನು ಬಾಲ್ಯ ಹಾಗೂ ಪ್ರೌಢಾವಸ್ಥೆಯಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಯಾಗುವ ಕನಸು ಹೊಂದಿದ್ದೀರಾ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಅವರು ಇಲ್ಲ; ಅಂತಹ ಯಾವದೇ ಕನಸು ಇರಲಿಲ್ಲ. ನನ್ನ ಅಂದಿನ ಕೆಲಸದ ಬಗ್ಗೆ ಮಾತ್ರ ಶ್ರದ್ದೆ, ಶಿಸ್ತಿನಿಂದ ಮಾಡುತ್ತಿದ್ದೆ. ನಂತರ ದಲ್ಲಿ ಹಂತ ಹಂತವಾಗಿ ಈ ಮಟ್ಟಕ್ಕೆ ತಲುಪಿಸಿದ್ದು ಎಂದು ಹೇಳಿದರು.

ನಿಮ್ಮ ಯಶಸ್ಸಿನ ಗುಟ್ಟೇನು ಎಂಬ ಪ್ರಶ್ನೆಗೆ ಕಠಿಣ ಪರಿಶ್ರಮ, ಕರ್ತವ್ಯದಲ್ಲಿ ಶ್ರದ್ದೆ, ಶಿಸ್ತು, ಇಲ್ಲಿಗೆ ತಲುಪಲು ಸಾಧ್ಯವಾಯಿತು ಎಂದು ತಿಳಿಸಿದರು.

ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ನಿಮ್ಮಂತೆ ಸಾಧನೆ ಮಾಡಲು ನಮಗೆ ನೀವು ನೀಡುವ ಸಲಹೆಗಳೇನು ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಮೊದಲು ಮೊಬೈಲ್ ಬಳಕೆಯನ್ನು ದೂರವಿಡಿ, ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಪಠ್ಯ ಹಾಗೂ ಪಠ್ಯೇತರ ಜ್ಞಾನವನ್ನು ಬೆಳೆಸಿಕೊಳ್ಳುವ ಮೂಲಕ ಯಾವಾಗಲೂ ಸಕಾರಾತ್ಮಕ ಚಿಂತಿಸಿ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ, ಶಿಸ್ತು ಹಾಗೂ ಸಮಯಪಾಲನೆಗೆ ಒತ್ತು ನೀಡಿ ಎಂದು ಹಿತವಚನ ಹೇಳಿದರು. ಸಂವಾದದಲ್ಲಿ ಎಂ.ಸಿ. ವರುಣ್ ಉತ್ತಯ್ಯ, ಸಿ.ವಿ. ಶ್ರೇಯ, ಸಿ.ಪಿ. ರ್ಯಾನ್ಸಿ, ಮೋನಿಷ ಲಕ್ಷ್ಮಿ, ಎಂ.ಎನ್. ಸೀತಮ್ಮ ಭಾಗವಹಿಸಿ ದ್ದರು.