ಮಡಿಕೇರಿ, ಜೂ. 17: ಅಂತರ ಕೆ.ಐ.ಸಿ.ಎಂ ತರಬೇತಿ ಸಂಸ್ಥೆಗಳ ಚರ್ಚಾ ಸ್ಪರ್ಧೆಯಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಮಡಿಕೇರಿ ತರಬೇತಿ ಸಂಸ್ಥೆಯ ಅಭ್ಯರ್ಥಿ ರೀಷ್ಮಾ ತಾಯಮ್ಮ ಪ್ರಥಮ ಮತ್ತು ಡಯಾನ ಹೆಚ್.ಆರ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಜ್ಯ ಸಹಕಾರ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಅರುಣ್ಕುಮಾರ್ ಬಹುಮಾನ ವಿತರಣೆ ಮಾಡಿದರು.