ಗೋಣಿಕೊಪ್ಪ ವರದಿ, ಜೂ. 16: ವಿದ್ಯಾರ್ಥಿನಿಗಳಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲು ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಪ್ರಯಾಸ್ ಎಂಬ ಕಾರ್ಯಕ್ರಮಕ್ಕೆ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು. ಸುಮಾರು 40 ವಿದ್ಯಾರ್ಥಿನಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡುವ ಮೂಲಕ ಕಾಳಜಿ ಮೂಡಿಸಲಾಯಿತು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಮಾತನಾಡಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ಸೋಫಿಯಾ, ಜೆಸಿಐ ಪ್ರಮುಖರಾದ ಸುಮಿ ರಾಬಿನ್ ಇದ್ದರು.