ಕುಶಾಲನಗರ, ಜೂ. 16: ಕುಶಾಲನಗರ ಕಾವೇರಿ ಜೆಸಿಸ್ ಮತ್ತು ಮಂಡ್ಯದ ವಿವೇಕ ಶಿಕ್ಷಣ ವಾಹಿನಿ ಆಶ್ರಯದಲ್ಲಿ ಸ್ಥಳೀಯ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಂಡ್ಯದ ವಿವೇಕ ಶಿಕ್ಷಣ ವಾಹಿನಿಯ ಸ್ಥಾಪಕರಾದ ನಿತ್ಯಾನಂದ ವಿವೇಕವಂಶಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪರೀಕ್ಷೆಯನ್ನು ಎದುರಿಸುವ ಕ್ರಮಗಳ, ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ಶಾಲೆಯ ಮತದಾರರ ಸಾಕ್ಷರತಾ ಕ್ಲಬ್ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ಕೆ.ಡಿ. ಪ್ರಶಾಂತ್, ಖಜಾಂಚಿ ಸುಜಯ್, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ, ಶಿಕ್ಷಕರಾದ ರಂಗಸ್ವಾಮಿ, ಬಸವರಾಜು, ಮಹಾದೇವ್, ಶಿವಣ್ಣ, ಪುಟ್ಟರಾಜು, ಮಾರ್ಗರೇಟ್, ರಶ್ಮಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಶಾಲೆಯ ಆವರಣದಲ್ಲಿ ಗಿಡ ನೆಡಲಾಯಿತು.