ಮಡಿಕೇರಿ, ಜೂ. 16: ಶೈಕ್ಷಣಿಕ ವರ್ಷದಲ್ಲಿ 500ಕ್ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾದ ಮಹಮ್ಮದ್ ಅಮೀರ್ ಕೆ.ಹೆಚ್., ಮಹಮ್ಮದ್ ತಸ್ರೀಫ್ ಸಿ.ಜೆ., ಗಗನ್ ಎಂ.ಸಿ., ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಾದ ಗೌತಮಿ ಎಂ.ಎನ್., ವಿಂದ್ಯಾಶ್ರೀ, ಶ್ವೇತಾ ಬಿ.ಡಿ., (ವಾಣಿಜ್ಯ ವಿಭಾಗ), ತೇಜೆಶ್ ಕೆ., ಸುಮಿತ್ರ ಪಿ.ಆರ್., ಕಾವ್ಯ ಕೆ.ಎಂ., ಸ¥sóÀರೀನಾ ಇ.ಎಸ್. (ಕಲಾ ವಿಭಾಗ) ಹಾಗೂ ಶೇ. 100 ಫಲಿತಾಂಶ ತಂದು ಕೊಟ್ಟ ದ್ವಿತೀಯ ಪಿ.ಯು.ಸಿ.ಯ ಎಲ್ಲಾ 50 ವಿದ್ಯಾರ್ಥಿಗಳನ್ನು ಸಂಪಾಜೆ ಪದವಿಪೂರ್ವ ಕಾಲೇಜಿನ ರಂಗಮಂಚದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಕೆ. ನಾರಾಯಣ ಭಟ್ ಇವರು ಶೇ. 100 ಫಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ರೂ. 1000 ಪೆÇ್ರೀತ್ಸಾಹಕ ಬಹುಮಾನ ನೀಡಿದರು. ಸಂಸ್ಥೆಯ ವತಿಯಿಂದಲೂ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಡ್ರಾಯಿಂಗ್ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ್, ದ್ವಿತೀಯ ಬಂದ ವಿದ್ಯಾರ್ಥಿಗಳಿಗೂ ಬಹುಮಾನ ನೀಡಲಾಯಿತು. ಹೆಚ್. ರಮಾನಂದ, ಸಂಸ್ಥೆಯ ಅಧ್ಯಕ್ಷ ಕೆ.ಜಿ. ರಾಜರಾಮ, ಎನ್.ಎಸ್. ದೇವಿಪ್ರಸಾದ್ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಯು.ಕೆ. ಜಯರಾಮ, ಸಂಚಾಲಕ ಎಂ. ಶಂಕರನಾರಾಯಣ ಭಟ್, ಖಜಾಂಚಿ ಬಿ.ಆರ್. ಪದ್ಮಯ್ಯ, ಕಾರ್ಯದರ್ಶಿ ಸದಸ್ಯ ಕೆ.ಜಿ. ಮುರಳೀಧರ್, ಸುಬ್ರಮಣ್ಯ ಉಪಾದ್ಯಾಯರು ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ನೌಕರ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಂಶುಪಾಲೆ ಮಾಲತಿ ವೈ.ಕೆ. ಸ್ವಾಗತಿ, ಲೋಕ್ಯಾನಾಯ್ಕ ಬಿ., ಪ್ರಜ್ಞಾ, ವಿದ್ಯಾ, ನಯನಕುಮಾರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಚನ್ನಬಸಪ್ಪ ವಂದಿಸಿದರು.