ಸೋಮವಾರಪೇಟೆ, ಜೂ. 16: ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಹರೀಶ್ ಅವರು, ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು. ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷ ಬಸವರಾಜು ವಹಿಸಿದ್ದರು.
ಇದೇ ಸಂದರ್ಭ ಪಟ್ಟಣದ ವಿವಿಧ ಖಾಸಗಿ ಶಾಲೆಗಳಿಗೆ ತೆರಳುತ್ತಿದ್ದ 17 ಮಕ್ಕಳನ್ನು ಬೇಳೂರಿನ ಸರ್ಕಾರಿ ಶಾಲೆಗೆ ದಾಖಲಿಸಲು ಶ್ರಮವಹಿಸಿದ ಅಂಗನವಾಡಿ ಶಿಕ್ಷಕಿ ಜಯಲಲಿತ, ಆಶಾ ಕಾರ್ಯಕರ್ತೆ ನಾಗಮಣಿ ಅವರುಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ನಾಗಮಣಿ ಅವರು ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ಮೀನಾ, ಮುಖ್ಯಶಿಕ್ಷಕ ಯೋಗೇಶ್, ಸಿಆರ್‍ಪಿ ಅಶೋಕ, ಪ್ರಮುಖರಾದ ಆನಂದ್, ಶಿಕ್ಷಕರುಗಳಾದ ಸೋಮಶೇಖರಾಚಾರ್ಯ, ಎಂ.ಕೆ. ಸುಜಾತ ಅವರುಗಳು ಉಪಸ್ಥಿತರಿದ್ದರು.