ಸುಂಟಿಕೊಪ್ಪ, ಜೂ. 16: ಬೆಂಗಳೂರಿನ ಉದ್ಯೋಗಿಗಳಾಗಿರುವ ಮಂಜುನಾಥ್ ಹಾಗೂ ಸ್ನೇಹಿತರ ಬಳಗವು ಕಳೆದ 3 ವರ್ಷಗಳಿಂದ ಸತತವಾಗಿ ಕಾನ್‍ಬೈಲ್ ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದಾರೆ.
ಕಾನ್‍ಬೈಲ್ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಮಂಜುನಾಥ್ ಶಿಕ್ಷಣ ಪಡೆಯಲು ಬಡತನ ಯಾವದೇ ಕಾರಣದಿಂದಲೂ ತೊಡಕಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಾವು ವಿದ್ಯಾರ್ಜನೆ ಮಾಡಿÀ ಶಾಲೆ, ಪೋಷಕರಿಗೆ ಕೀರ್ತಿಯನ್ನು ತಂದು ದೇಶದ ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು.
ಗ್ರಾ.ಪಂ. ಸದಸ್ಯ ಕೆ.ಪಿ. ವಸಂತ ಕುಮಾರ್ ಮಾತನಾಡಿ, ಪ್ರತಿ ವರ್ಷವೂ ಪ್ರೌಢಶಾಲೆಯು ಉತ್ತಮ ಫಲಿತಾಂಶ ನೀಡುತ್ತಿದೆ, ಶಾಲೆಯ ಬೋಧಕ ವೃಂದವು ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆಗೆ ಅಭಿನಂದನೆ ಸಲ್ಲಿಸಿ ಈ ವರ್ಷದ ಫಲಿತಾಂಶಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಕಿಟ್ಟಣ್ಣ ರೈ, ಬಾಬು ಶಾಲಾ ಮುಖ್ಯೋಪಾಧ್ಯಾಯ ಮಂಜೇಶ್, ಶಿಕ್ಷಕರಾದ ಸುಮಾ, ಲತಾ ವಿ.ಪೈ., ನವೀನ್ ಕುಮಾರ್, ಜಿ.ಕೆ. ಪಾರ್ವತಿ, ಮಾಲಾದೇವಿ ಇದ್ದರು.