ನಾಪೆÇೀಕ್ಲು, ಜೂ. 15: ಬಡವರ ಏಳಿಗೆಯಿಂದ ಮಾತ್ರ ಧರ್ಮದ ಉದ್ಧಾರ ಸಾಧ್ಯ ಎಂದು ಕೇರಳ ರಾಜ್ಯದ ವಯನಾಡುವಿನ ಮಹಮ್ಮದ್ ರಫ್‍ಶಾನ್ ಅಶ್ರಫಿ ಅಭಿಪ್ರಾಯಪಟ್ಟರು.

ನಾಪೆÇೀಕ್ಲು ಟೌನ್ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಶ್ರಯದಲ್ಲಿ ನಾಪೆÇೀಕ್ಲು ಅಲ್ ಅನ್ಸಾರ್ ವಿವಾಹ ಸಮಿತಿ ನೇತೃತ್ವದಲ್ಲಿ ಚೆರಿಯಪರಂಬು ಶಾದಿ ಮಹಲ್‍ನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಕಾರದಿಂದ ಮಾಡಲು ಸಾಧ್ಯವಾಗದ ಕಾರ್ಯ ಗಳನ್ನು ಮುಸ್ಲಿಂ ಸಂಘಟನೆಗಳು ಬಡ ಜನರಿಗೆ ಒದಗಿಸುತ್ತಿದೆ. ಇದರಿಂದ ಹಲವಾರು ಬಡ ಕನ್ಯೆಯರಿಗೆ ವಿವಾಹ ಭಾಗ್ಯ ದೊರೆತಿದೆ. ಮುಸ್ಲಿಂ ಬಾಂಧವರು ಮುಂದೆಯೂ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಡಪಾಲದ ಶೈಖುನ ಅಬ್ದುಲ್ಲ ಫೈಝಿ ಮುಸ್ಲಿಯಾರ್ ಎಲ್ಲ ದಾನಗಳಲ್ಲಿಯೂ ಕನ್ಯಾ ದಾನ ಶ್ರೇಷ್ಠವಾಗಿದೆ. ನಾಪೆÇೀಕ್ಲುವಿನಲ್ಲಿ ಇಂತಹ ಶ್ರೇಷ್ಠ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿಗೆ ಅಭಿನಂದನೆಗಳು. ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾಪೆÇೀಕ್ಲು ಟೌನ್ ಜಮಾಅತ್ ಮುದರಿಸ್ ಖತೀಬ ಅಶ್ರಫ್ ಅಹ್‍ಸನಿ ಮಾತನಾಡಿ ನಾವು ಮಾತ್ರ ಏಳಿಗೆಯಾದರೆ ಸಾಲದು. ನಮ್ಮ ನೆರೆಹೊರೆಯವರೂ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಮಾತ್ರ ದೇಶ ಪ್ರಗತಿ ಸಾಧ್ಯ. ಯುವ ಜನತೆ ಮಾದಕ ವ್ಯಸನಗಳಿಗೆ ದಾಸರಾಗಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅನ್ಸಾರ್ ವಿವಾಹ ಸಮಿತಿ ಅಧ್ಯಕ್ಷ ಪಿ.ಎಂ.ಅಬ್ದುಲ್ ರಶೀದ್ ವಹಿಸಿದ್ದರು.

ವೇದಿಕೆಯಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಮೀದ್ ಹಾಜಿ ಬಿ.ಹೆಚ್, ನಾಪೆÇೀಕ್ಲು ಗ್ರಾ.ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕೊಡಗು ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್, ಅಬ್ದುಲ್ ರೆಹಮಾನ್, ಮೊಯಿದೀನ್ ಕುಂಞÂ ಹಾಜಿ, ಪಿ.ಎಂ.ಖಾಸಿಂ, ಮಹಮ್ಮದ್ ಅಲಿ, ಹಮೀದ್ ಹಾಜಿ, ಸೌಖತ್ ಅಲಿ ಹಾಜಿ, ಅಹಮ್ಮದ್ ಹಾಜಿ, ಅಸ್ಮತ್‍ವುಲ್ಲಾ ಹಾಜಿ, ಅಬ್ದುಲ್ ಅಜೀಜ್, ಮನ್ಸೂರ್ ಅಲಿ, ಸಾದಿಕ್ ಪಿ.ಎಂ., ನಜೀರ್ ಹಾಜಿ, ಪರವಂಡ ಹಸೈನಾರ್ ಹಾಜಿ, ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಶೈಖುನ ಮುಹಮ್ಮದ್ ಮುಸ್ಲಿಯಾರ್ ಪ್ರಾರ್ಥನೆ, ನಾಪೆÇೀಕ್ಲು ಯು.ಎ.ಇ ಕಮಿಟಿ ಅಧ್ಯಕ್ಷ ಉಸ್ಮಾನ್ ಹಾಜಿ ಕೆ.ಕೆ. ಸ್ವಾಗತಿಸಿ, ವಂದಿಸಿದರು.