ಮಡಿಕೇರಿ, ಜೂ. 16: ಮೂರ್ನಾಡು ಗೌಡ ಸಮಾಜದ ಬಳಿ ಮುಖ್ಯ ರಸ್ತೆಯ ಪಕ್ಕದಲ್ಲಿ ಶರತ್ ಎಂಬವರು ತಮ್ಮ ಕಾರನ್ನು ನಿಲ್ಲಿಸಿ ನೋಡಲಾಗಿ, ಮೂರ್ನಾಡುವಿನಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಆಸಾಮಿಯಾಗಿದ್ದು, ಹೆಸರು ಗೊತ್ತಿರುವದಿಲ್ಲ. ಈತನ ತಲೆ, ಸೊಂಟ, ಕೈಗಳಲ್ಲಿ ರಕ್ತ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಶರತ್ ಮತ್ತು ಜೊತೆಯಲ್ಲಿದ್ದ ಗಣೇಶ್ ವ್ಯಕ್ತಿಯನ್ನು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವದಾಗಿ ತಿಳಿಸಿದ್ದಾರೆ.

ರಾತ್ರಿ ಯಾವದೋ ವಾಹನ ಭಿಕ್ಷುಕನಿಗೆ ಅಪಘಾತಗೊಳಿಸಿ ಪರಾರಿಯಾಗಿದ್ದು, ಅಪಘಾತದಿಂದ ಗಾಯಗೊಂಡು ಮೃತಪಟ್ಟಿರುವದಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದಿರುವದಿಲ್ಲ ಮತ್ತು ಅಪಘಾತಗೊಳಿಸಿದ ವಾಹನ ಪತ್ತೆಯಾಗಿರುವದಿಲ್ಲ. ಇದರ ಬಗ್ಗೆಮಾಹಿತಿ ತಿಳಿದು ಬಂದಲ್ಲಿ ಪೊಲೀಸ್ ಅಧೀಕ್ಷಕರು-08272-229000, ಪೊಲೀಸ್ ಉಪ ಅಧೀಕ್ಷಕರು -9480804920 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.