ನಿಟ್ಟೂರು: ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವನಂಜಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಚಂಡ ಸೋಮಯ್ಯ, ಕಾಫಿ ಬೆಳೆಗಾರ ಕಾರ್ಮಾಡು ಸುಬ್ರಮಣ್ಯ, ಪಡಿಞರಂಡ ಪ್ರಭುಕುಮಾರ್, ವಿಜಯ ಗ್ರಾಮೀಣ ಯುವಕ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಸೋಮಯ್ಯ, ಆಶ್ರಮ ಶಾಲೆ ಶಿಕ್ಷಕ ರಮೇಶ್, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.ಚೆಟ್ಟಳ್ಳಿ: ಸ್ವಚ್ಛಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಹಾಗೂ ಅಧ್ಯಕ್ಷೆ ವತ್ಸಲ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಸ್ವಚ್ಛಮೇವ ಜಯತೆ, ಜಲಾಮೃತ ಕಾರ್ಯಕ್ರಮ ತಾ. 11 ರಿಂದ ಆರಂಭಗೊಂಡಿದ್ದು, ಜುಲೈ 10 ರವರೆಗೆ ನಡೆಯಲಿದೆ ಎಂದರು.
ಜಿಲ್ಲಾಡಳಿತ ಪ್ರತೀ ಗ್ರಾಮ ಪಂಚಾಯಿತಿಗೆ 3 ಸಾವಿರ ಗಿಡಗಳನ್ನು ನೀಡಿದ್ದು, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸಸಿಗಳನ್ನು ನೆಡಲಾಗುವದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕಾರ್ಯದರ್ಶಿ ಮಂಜುಳಾ, ಸದಸ್ಯರಾದ ಮೊಹಮ್ಮದ್ ರಫಿ, ಸುಲೋಚನಾ, ಸಿಬ್ಬಂದಿಗಳಾದ ಚಂದ್ರ, ಸಾಹೀರ, ಕಂದಸ್ವಾಮಿ, ಗಣೇಶ, ಹಸನ್ ಇದ್ದರು.ಸುಂಟಿಕೊಪ್ಪ: ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಗಿಡ-ಮರ ಬೆಳೆಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಉಪಸಂರಕ್ಷಾಣಾಧಿಕಾರಿ ಎಂ.ಜೆ. ಗೋವರ್ಧನ್ ಸಿಂಗ್ ಹೇಳಿದರು.
ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ ಮಡಿಕೇರಿ, ಅರಣ್ಯ ವಿಭಾಗದ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ಕಚೇರಿ ವತಿಯಿಂದ ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಇಕೋ-ಕ್ಲಬ್, ಎನ್.ಎಸ್‍ಎಸ್ ಘಟಕ ಹಾಗೂ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಮತ್ತು ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ಜಾಗೃತಿ ಆಂದೋಲನದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್, ವಿದ್ಯಾರ್ಥಿಗಳು ಗಿಡನೆಟ್ಟು ಬೆಳೆಸಲು ಮತ್ತು ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದರು. ಸೋಮವಾರಪೇಟೆ ಆರ್‍ಎಪ್‍ಓ ಎನ್. ಲಕ್ಷ್ಮೀಕಾಂತ್, ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ಶಿಕ್ಷಕ ಜಿ. ಶ್ರಿನಾಥ್ ಮಾತನಾಡಿದರು. ಶಿಕ್ಷಕಿ ಕೆ.ಎಸ್. ಅಶ್ವಿನಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಭೋದಿಸಿದರು. ಪ್ರಾಂಶುಪಾಲ ಸಿ.ಜಿ. ಮಂದಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ನಿರ್ದೇಶಕರಾದ ಸಿ.ಪಿ. ಮುದಪ್ಪ, ಕೆ.ಎಸ್. ಮಂಜುನಾಥ್, ಸೀತಾ ಚಿಟ್ಟಿಯಪ್ಪ, ಎನ್‍ಎಸ್‍ಎಸ್ ಅಧಿಕಾರಿ ಮೋಹನ್ ಹೆಗ್ಡೆ, ಮುಖ್ಯ ಶಿಕ್ಷಕಿ ಎನ್.ಎ. ರೇವತಿ, ಡಿಆರ್‍ಎಫ್‍ಓ ಎಂ.ಜಿ. ದರ್ಶಿನಿ ಇತರರು ಇದ್ದರು. ವಿದ್ಯಾರ್ಥಿನಿ ನಿಸರ್ಗ ನಿರ್ವಹಿಸಿದರು.ಕೂಡಿಗೆ: ಹೆಬ್ಬಾಲೆ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗಿಡ ನೆಡುವದರ ಮೂಲಕ ಗ್ರಾ.ಪಂ. ಅಧ್ಯಕ್ಷೆ ಲತಾ ನೆರವೇರಿಸಿ, ಗ್ರಾಮ ಪಂಚಾಯಿತಿ ವಾರ್ಷಿಕ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಹಣವನ್ನು ಪರಿಸರ ಸಂರಕ್ಷಣೆಗೆ ಗಿಡ ನೆಡಲು ಕಾದಿರಿಸಿ ಆ ಹಣದಲ್ಲಿ ಗ್ರಾ.ಪಂ. ವ್ಯಾಪ್ತಿಯ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಅನುಕೂಲಕ್ಕೆ ತಕ್ಕ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹೆಬ್ಬಾಲೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್ ಮಾತನಾಡಿ, ಪರಿಸರವನ್ನು ಸ್ವಚ್ಛತೆ ಮಾಡಿದ್ದಲ್ಲಿ, ನಮ್ಮ ಆರೋಗ್ಯವೂ ಕೂಡಾ ಉತ್ತಮವಾಗಿರುತ್ತದೆ, ಪರಿಸರವನ್ನು ಸಂರಕ್ಷಣೆ ಮಾಡಿ, ಗಿಡಗಳನ್ನು ಹೆಚ್ಚು ಹೆಚ್ಚು ನೆಟ್ಟು ಉತ್ತಮವಾದ ಪರಿಸರದಲ್ಲಿ ಸ್ವಚ್ಛವಾಗಿ ಉತ್ತಮವಾದ ಗಾಳಿ ಬೆಳಕು ಪಡೆಯುವದರಿಂದ ಉತ್ತಮ ಆರೋಗ್ಯವು ನಮ್ಮದಾಗುತ್ತದೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಪದ್ಮಾ, ಸದಸ್ಯರಾದ ಚೇತನ್, ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಇದ್ದರು.