ಸುಂಟಿಕೊಪ್ಪ, ಜೂ. 16: ಮುಹಮ್ಮದ್ ಆಲಿ ಶಿಹಾಬ್ ತಂಙಳ್ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ ಅಧ್ಯಯನ ತರಗತಿಗೆ ಚಾಲನೆ ನೀಡಿದರು.
ಕಾಲೇಜಿನ ಸಭಾಂಗಣದಲ್ಲಿ ಮಾಜಿ ಶಾಸಕರು, ಸಂಸ್ಥಾಪಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿರುವ ಸಯ್ಯದ್ ಝೆನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ಚಾಲನೆ ನೀಡಿದರು. ಕೊಡಗಿನ ಬಡ ಮತ್ತು ನಿರ್ಗತಿಕ ವರ್ಗಕ್ಕೆ ಸೇರಿದ 90 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಡುತ್ತಿದ್ದಾರೆ. ಪ್ರತಿವರ್ಷ ಷರಿಯತ್ ಕಾಲೇಜಿಗೆ 30 ವಿದ್ಯಾರ್ಥಿಗಳಿಗೆ ಹಾಗೂ ಕುರಾನ್ ತರಗತಿಗೆ 20 ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಲಾಗುತ್ತಿದೆ.ಇಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಊಟ, ವಸತಿ ಇನ್ನಿತರ ಶಿಕ್ಷಣಕ್ಕೆ ಬೇಕಾದ ವಸ್ತುಗಳನ್ನು ಕಾಲೇಜಿನ ಆಡಳಿತ ಮಂಡಳಿಯು ಸಂಪೂರ್ಣ ಉಚಿತವಾಗಿ ನೀಡುತ್ತಿದೆ ಎಂದು ಸಂಸ್ಥಾಪಕ ಕೆ.ಎಂ. ಇಬ್ರಾಹಿಂ ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ವೈ.ಎಂ. ಉಮ್ಮರ್ ಫೈಜಿ, ಪ್ರಾಂಶುಪಾಲ ಝೈನುದ್ದೀನ್ ಫೈಜಿ, ಜಬ್ಬಾರ್ ಹುದವಿ, ಉಸ್ಮಾನ್ ಫೈಜಿ, ಸಂಸ್ಥೆಯ ಉಪಾಧ್ಯಕ್ಷ ಬಾಪು ಹಾಜಿ, ಆರಿಫ್ ಫೈಜಿ, ಇಕ್ಬಾಲ್ ಮೌಲ್ವಿ, ಮುಂತಾದವರು ಭಾಗವಹಿಸಿದ್ದರು.
ಸಮಸ್ತ ಕೇರಳದ ಜಂಇಯ್ಯತ್ತು ಉಲಾಮಾ ಸದಸ್ಯರಾದ ಅಬ್ಧುಲ್ ಫೈಜಿ ಅವರು ಪ್ರಾರ್ಥನೆ ನೆವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ ಸ್ವಾಗತಿಸಿದರು.