ಕೂಡಿಗೆ, ಜೂ. 16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಅರಶಿನಗುಪ್ಪೆ ಗ್ರಾಮದಲ್ಲಿ ಕೊಡಗಿನ ಕಾವೇರಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಕಾನೂರಾಯಣ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯದ ಮೇಲ್ವಿಚಾರಕಾರಕ ಕೆ. ವಿನೋದ್‍ಕುಮಾರ್, ಜ್ಞಾನವಿಕಾಸ ಸಮನ್ವಯಾಕಾರಿ ಪದ್ಮಾ, ಒಕ್ಕೂಟದ ಅಧ್ಯಕ್ಷೆ ವಿಮಲಾ, ಒಕ್ಕೂಟದ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.