ಕುಶಾಲನಗರ, ಜೂ. 13 : ಕುಶಾಲನಗರ ದೇವಾಂಗ ಸಂಘ, ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ಸಮಿತಿಯ ವತಿಯಿಂದ ಶ್ರೀ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ತಾ.15 ರಂದು ನಡೆಯಲಿದೆ.
ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ತಾ. 6 ಗಂಟೆಗೆ ಧ್ವಜಾರೋಹಣ ನಂತರ ಕಾವೇರಿ ನದಿಯಿಂದ ಕಳಸ ತಂದು ಮುಖ್ಯ ಬೀದಿಯಲ್ಲಿ ಮೆರವಣಿಗೆ ಮತ್ತು ದೇವಿಗೆ ಪೂಜಾ ವಿಧಿಗಳು ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿವೆ.
ಸಂಜೆ 6 ಗಂಟೆಗೆ ಮಂಗಳವಾದ್ಯ ಸಮೇತ ದೀಪಾಲಂಕಾರದೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆ ಹೊರಡಿಸಲಾಗುವದು ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಟಿ.ವಿಜೇಂದ್ರ ಹಾಗೂ ಉಪಾಧ್ಯಕ್ಷ ಡಿ.ಆರ್.ಸೋಮಶೇಖರ್ ತಿಳಿಸಿದ್ದಾರೆ.