ಮಡಿಕೇರಿ, ಜೂ. 13: ಮಡಿಕೇರಿಯ ಜೈಲ್ ಸಮೀಪದ ಹೊರ ಆವರಣದಲ್ಲಿ ಕೊಡಗು ಫಾರ್ ಟುಮಾರೋ ವತಿಯಿಂದ ಆಯೋಜಿಸಲಾದ ಗಿಡ ನೆಡುವ ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಶಾಲೆಯ ಎನ್‍ಸಿಸಿ ವಿದ್ಯಾರ್ಥಿಗಳು ಭಾಗವಹಿಸಿ ಸುಮಾರು 70 ಗಿಡಗಳನ್ನು ನೆಡಲಾಯಿತು.

ಮಕ್ಕಳೊಂದಿಗೆ ಗ್ರೀನ್ ಸಿಟಿ ಫೋರಂನವರು ಪಾಲ್ಗೊಂಡಿದ್ದರು. 5 ಮಕ್ಕಳಿಗೆ ಒಂದು ಗಿಡದ ಜವಾಬ್ದಾರಿಯನ್ನು ವಹಿಸಲು ಕೇಳಿಕೊಳ್ಳಲಾಯಿತು. ಮಕ್ಕಳು ಗಿಡವನ್ನು ರಕ್ಷಣೆ ಮಾಡಿ ನೋಡಿಕೊಳ್ಳಲು ತಿಳಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಸಾ ಮತ್ತು ಶಿಕ್ಷಕಿಯರು ಹಾಜರಿದ್ದರು.