ಮಡಿಕೇರಿ, ಜೂ. 12: ಈಗಿನ ರಾಜಕೀಯ ವ್ಯವಸ್ಥೆ ಯಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಪರ್ಯಾಯ ತೃತೀಯ ಶಕ್ತಿ ರಚನೆ ಮಾಡುವ ಬಗ್ಗೆ ಚಿಂತನೆ ಇರುವ ಬಗ್ಗೆ ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ ಯಂ.ಸಿ. ನಾಣಯ್ಯ ತಮ್ಮ ಇಂಗಿತ ವ್ಯಕ್ತಪಡಿಸಿದರು.ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಾಣಯ್ಯ ಅವರು, ಎಲ್ಲ ರಾಜಕೀಯ ಪಕ್ಷಗಳು ವೈಯಕ್ತಿಕ ವಿಚಾರಗಳಲ್ಲೇ ಕಾಲ ಕಳೆಯುತ್ತಿದ್ದು, ಯಾರಿಂದಲೂ ಭ್ರಷ್ಟಾಚಾರ ತಡೆಯಲು ಸಾಧ್ಯವಾಗುತ್ತಿಲ್ಲ. ಹಣ ಎಲ್ಲಿಯಾದರೂ ಸಿಗುತ್ತದೆಂದರೆ ಎಲ್ಲ ಪಕ್ಷಗಳೂ ಒಂದಾಗಿಬಿಡುತ್ತವೆ ಹಾಗೂ ಇದಕ್ಕೆ ಪರ್ಯಾಯ ಮಾರ್ಗವೆಂದರೆ ತೃತೀಯ ಶಕ್ತಿ ಹುಟ್ಟು ಹಾಕುವದು. ಈ ನಿಟ್ಟಿನಲ್ಲಿ ಸಮಾನ ಮನಸ್ಕರಾದ ಅಡಗೂರು ವಿಶ್ವನಾಥ್ ಅವರೊಂದಿಗೆ ಮಾತುಕತೆ ನಡೆಸುವದಾಗಿ ಹೇಳಿದರು.
ವಿಶ್ವನಾಥ್ ಅವರು ಶಿಕ್ಷಣ ಸಚಿವರಾಗಿದ್ದಾಗ ಕೆಲವೊಂದು ಮಠ ಶಿಕ್ಷಣ ಸಂಸ್ಥೆಗಳು ಅನಧಿಕೃತ ಹೆಸರಿನಲ್ಲಿ ಸರಕಾರದ
ರಾಜ್ಯ ರಾಜಕಾರಣದಲ್ಲಿ ಪರ್ಯಾಯ ಶಕ್ತಿ
(ಮೊದಲ ಪುಟದಿಂದ) ಅನುದಾನ ಪಡೆದುಕೊಳ್ಳುತ್ತಿರುವದನ್ನು ಪತ್ತೆ ಹಚ್ಚಿ ಅನುದಾನ ನಿಲ್ಲಿಸಿದ್ದರು. ನಾನು ಬೆಂಬಲಕ್ಕೆ ನಿಂತಿದ್ದೆ ಆದರೆ, ಇವರ ಬೆಂಬಲಕ್ಕೆ ನಿಲ್ಲದ ಸರಕಾರ ಇವರ ಖಾತೆಯನ್ನೇ ಬದಲು ಮಾಡಿತು. ಸಹಕಾರಿ ಸಚಿವರಾಗಿದ್ದಾಗ ಯಶಸ್ವಿನಿ ಯೋಜನೆ ಜಾರಿಗೊಳಿಸಿದ್ದು, ಇದರಿಂದ 25 ಲಕ್ಷಕ್ಕೂ ಅಧಿಕ ಮಂದಿ ರೈತರು ಸೌಲಭ್ಯ ಪಡೆಯುತ್ತಿದ್ದು. ಇದೀಗ ರಮೇಶ್ ಕುಮಾರ್ ಸಚಿವರಾದ ಬಳಿಕ ಸ್ಥಗಿತಗೊಳಿಸಿದ್ದಾರೆ. ಈ ಯೋಜನೆಯನ್ನು ಮರು ಜಾರಿಗೆ ತರುವಂತೆ ಮುಖ್ಯಮಂತ್ರಿಗಳಲ್ಲಿ ಒತ್ತಡ ಹೇರುವಂತೆ ವಿಶ್ವನಾಥ್ ಅವರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಶ್ವನಾಥ್ ಅವರೂ ಕೂಡ ನಮ್ಮ ಮಾತಿನಲ್ಲಿ ತಾವು ಸಚಿವರಾಗಿದ್ದಾಗ ನಾಣಯ್ಯ ಅವರು ವಿಪಕ್ಷ ನಾಯಕರಾಗಿದ್ದರು. ಉತ್ತಮ ಸಂಸದೀಯ ಪಟು ಆಗಿರುವ ನಾಣಯ್ಯ ಅವರು ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತಿದ್ದ ರೀತಿ ವಿಶೇಷವಾಗಿರುತ್ತಿತ್ತು. ನಾಣಯ್ಯ ಅವರು ನಮಗೆ ಮಾರ್ಗದರ್ಶಕರಾಗಿದ್ದರು ಎಂದು ಮೆಚ್ಚುಗೆಯ ನುಡಿಯಾಡಿದರು.