ವೀರಾಜಪೇಟೆ, ಜೂ. 11:ಕೊಡಗು ಕೇರಳ ಗಡಿ ಪ್ರದೇಶವಾದ ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಬೆಳಗಿನ ಜಾವ ಮುಂಗಾರು ಕೇರಳದ ಕಡೆಯಿಂದ ಪ್ರವೇಶಿಸಿದ್ದು

ಈ ವಿಭಾಗಕ್ಕೆ ನಿನ್ನೆ ಬೆಳಗಿನ 8ಗಂಟೆಯಿಂದ ಇಂದು ಬೆಳಗಿನ 8ಗಂಟೆಯವರೆಗೆ ಒಟ್ಟು 31.8 ಮಿ.ಮೀ (1.2 ಇಂಚುಗಳಷ್ಟು) ಮಳೆ ಸುರಿದಿದೆ. ವೀರಾಜಪೇಟೆ ವಿಭಾಗದ ಕದನೂರು, ಪಾಲಂಗಾಲ, ಕೆದಮುಳ್ಳೂರು, ಆರ್ಜಿ, ಬೆಟೋಳಿ ಸೇರಿದಂತೆ ವಿವಿಧೆಡೆಗಳಲ್ಲಿ ಮಳೆ ಸುರಿಯುತ್ತಿದೆ.