*ಗೋಣಿಕೊಪ್ಪಲು, ಜೂ. 11 : ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಬದಿಯಲ್ಲಿ ಗೋಣಿಕೊಪ್ಪಲಿನಿಂದ ತಂದ ಮಣ್ಣು ಹಾಗೂ ತ್ಯಾಜ್ಯವಸ್ತುಗಳನ್ನು ಸುರಿಯುತ್ತಿದ್ದ ಟ್ರ್ಯಾಕ್ಟರ್ ಚಾಲಕನಿಗೆ ದಂಡ ವಿಧಿಸಿ ಅದೇ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯವನ್ನು ವಾಪಸ್ ಕಳುಹಿಸಿದ ಘಟನೆ ಮಂಗಳವಾರ ನಡೆಯಿತು. ಗೋಣಿಕೊಪ್ಪಲಿನ ಟ್ರ್ಯಾಕ್ಟರ್ ಚಾಲಕ ರಾಜು ಎಂಬವರು ಟ್ರ್ಯಾಕ್ಟರ್‍ನಲ್ಲಿ ಮಣ್ಣು ತುಂಬಿಸಿಕೊಂಡು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದರು ಎನ್ನಲಾಗಿದೆ. ಇದನ್ನು ಪತ್ತೆ ಹಚ್ಚಿದ ಗ್ರಾಮ ಪಂಚಾಯಿತಿ ಪಿಡಿಓ ಕೆ.ಎಂ.ತಿಮ್ಮಯ್ಯ ಚಾಲಕ ರಾಜು ಅವರಿಗೆ ರೂ 500 ದಂಡ ವಿಧಿಸಿದ್ದಾರೆ.