ಸೋಮವಾರಪೇಟೆ,ಜೂ.11: ಕುಶಾಲನಗರ ಮತ್ತು ಸೋಮವಾರಪೇಟೆಯ 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಐಪಿಡಿಎಸ್ ಯೋಜನೆಯ ಕಾಮಗಾರಿಯಡಿ ಜಿ.ಓ.ಎಸ್. ಅಳವಡಿಕೆ ಮತ್ತು ಜಂಗಲ್ ಕಟ್ಟಿಂಗ್, ತುರ್ತು ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ತಾ. 12ರಂದು ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ತಾ. 12ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಸೋಮವಾರಪೇಟೆ ಪಟ್ಟಣ, ಚೌಡ್ಲು, ಹಾನಗಲ್, ದೊಡ್ಡಮಳ್ತೆ, ಐಗೂರು, ಅಬ್ಬೂರುಕಟ್ಟೆ, ಶಾಂತಳ್ಳಿ, ಕಿರಗಂದೂರು, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.