*ಗೋಣಿಕೊಪ್ಪಲು, ಜೂ. 12: ಮೀನುಗಾರಿಕೆ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಬಲೆ, ಪ್ಲಾಸ್ಟಿಕ್ ಬುಟ್ಟಿಗಳು ಹಾಗೂ ಇತರ ಸಲಕರಣೆಗಳನ್ನು ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ವಿತರಿಸಿದರು.
ಪೆÇನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕಿನ ಕೆದಂಬಳ್ಳುರು, ಬೋಯಿಕೇರಿ ಗ್ರಾಮದ ಫಲಾನುಭವಿಗಳಾದ 20 ಮಂದಿಗೆ ತಲಾ 2 ಪ್ಲಾಸ್ಟಿಕ್ ಬುಟ್ಟಿ ಹಾಗೂ ಒಂದು ಬಲೆಯನ್ನು ನೀಡಲಾಯಿತು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸದಸ್ಯರುಗಳಾದ ಮಾಲೇಟ್ಟಿರ ಪ್ರಶಾಂತ್, ಸೀತಮ್ಮ, ಜನಿತ್, ಗಣೇಶ್, ಸರೋಜ, ಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಮೀನುಗಾರಿಕೆ ಇಲಾಖೆ ಅಧಿಕಾರಿ ಪ್ರಿಯ ಹಾಜರಿದ್ದರು.