*ಗೋಣಿಕೊಪ್ಪಲು, ಜೂ. 12: ಪಟ್ಟಣದಲ್ಲಿನ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಏಕಮುಖ ವಾಹನ ಸಂಚಾರದ ಕ್ರಮ ಕೈಗೊಳ್ಳಲಾಯಿತು. ಆದರೂ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿದಿಲ್ಲ. ಇದನ್ನು ಮನಗಂಡ ಶಾಸಕÀ ಕೆ.ಜಿ. ಬೋಪಯ್ಯ ಅವರು ಪೆÇನ್ನಂಪೇಟೆ ಬೈಪಾಸ್ ರಸ್ತೆಯಲ್ಲಿರುವ ಸೇತುವೆಯನ್ನು ಅಗಲೀಕರಣಗೊಳಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.

ಸೋಮವಾರ ಬೈಪಾಸ್ ರಸ್ತೆಯ ಸಮೀಪವಿರುವ ಸೇತುವೆ ಬಳಿ ಶಾಸಕರು ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿ ಚರ್ಚಿಸಿ ತಕ್ಷಣವೇ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವದು, ಸೇತುವೆ ಅಗಲೀಕರಣಗೊಂಡರೆ ವಾಹನಗಳ ಸಂಚಾರಕ್ಕೆ ಸುಗಮವಾಗಲಿದೆ ಎಂದು ಹೇಳಿದರು.