*ಗೋಣಿಕೊಪ್ಪಲು, ಜೂ. 12: ವೀರಾಜಪೇಟೆ ಅರಣ್ಯ ವಿಭಾಗದ ತಿತಿಮತಿ ಪ್ರಾದೇಶಿಕ ವಲಯದ ಮಜ್ಜಿಗೆಹಳ್ಳ ಸಸ್ಯ ಕ್ಷೇತ್ರದಲ್ಲಿ ಬೆಳೆಸಿದ ಸಿಲ್ವರ್ ಹಾಗೂ ಇತರ ಕಾಡು ಜಾತಿ ಸಸಿಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು, ಪ್ರತಿ ಎಕರೆಗೆ 50 ಸಿಲ್ವರ್ ಸಸಿಗಳಂತೆ ಗರಿಷ್ಠ 250 ಸಸಿಗಳನ್ನು ವಿತರಿಸಲಾಗುವದು.
ಪ್ರತಿ ಒಂದು ಸಿಲ್ವರ್ ಸಸಿಗೆ 1 ಕಾಡು ಜಾತಿ ಸಸಿ ಕಡ್ಡಾಯವಾಗಿ ಪಡೆದುಕೊಳ್ಳುವದು. ಸಾರ್ವಜನಿಕರು ಅರ್ಜಿ, ಅರ್.ಟಿ.ಸಿ. ಮತ್ತು ಆಧಾರ್ ಕಾರ್ಡಿನ ಪ್ರತಿಯನ್ನು ಕಚೇರಿಯಲ್ಲಿ ನೀಡಿ ಸಸಿಗಳನ್ನು ಪಡೆದುಕೊಳ್ಳಲು ಕೋರಲಾಗಿದೆ ಎಂದು ಆರ್.ಎಫ್.ಓ. ಅಶೋಕ್ ತಿಳಿಸಿದ್ದಾರೆ.