ಸುಂಟಿಕೊಪ್ಪ, ಜೂ. 11: ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರ ಆದ್ಯತೆ ನೀಡುತ್ತಿದ್ದು, ಮಾದಾಪುರ ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಕಿಮ್ಮತ್ತು ನೀಡಿದಂತಿಲ್ಲ ಎಂಬ ಅಸಮಾಧಾನ ಅಲ್ಲಿನ ನಿವಾಸಿಗಳದ್ದಾಗಿದೆ.

ಸೋಮವಾರಪೇಟೆ ಮಡಿಕೇರಿಗೆ ಸಾಗುವ ಮಧ್ಯಭಾಗದಲ್ಲಿ ಸಿಗುವ ಮಾದಾಪುರ ಪಟ್ಟಣದ ಮಾರುಕಟ್ಟೆ ರಸ್ತೆಗೆ ಪ್ರವೇಶಿಸುವ ಖಾಸಗಿ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ನಿರುಪಯುಕ್ತ ವಸ್ತುಗಳನ್ನು ಎಸೆದು ವಾತಾವರಣ ಕಲುಷಿತಗೊಳಿಸಲಾಗುತ್ತಿದೆ. ಇಲ್ಲಿ ಜನವಸತಿ, ಅಂಗಡಿ ಹೊಟೇಲುಗಳು ಇದ್ದು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಗ್ರಾಮ ಪಂಚಾಯಿತಿ ಇಲ್ಲಿ ಕಸವನ್ನು ತಂದು ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.