ಮಡಿಕೇರಿ, ಜೂ. 11: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಘೋಷಣೆಯಾದ ನೂತನ ತಾಲೂಕುಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರಾದ ಬಿ.ಎಸ್. ಲೋಕೇಶ್‍ಸಾಗರ್ ಅವರು ಆಯ್ಕೆ ಮಾಡಿದ್ದಾರೆ.

ಕುಶಾಲನಗರ (ಕಾವೇರಿ ತಾಲೂಕು) ತಾಲೂಕಿಗೆ ಹಾಲಿ ಹೋಬಳಿ ಅಧ್ಯಕ್ಷರಾಗಿರುವ ಎಂ.ಡಿ. ರಂಗಸ್ವಾಮಿ ಅವರನ್ನು ಹಾಗೂ ಪೊನ್ನಂಪೇಟೆ ತಾಲೂಕಿಗೆ ಹಾಲಿ ಹೋಬಳಿ ಅಧ್ಯಕ್ಷರಾದ ಡಾ. ಚಂದ್ರಶೇಖರ್ ಅವರನ್ನು ನೂತನ ತಾಲೂಕು ಅಧ್ಯಕ್ಷರಾಗಿ ಮುಂದುವರೆಯುವಂತೆ ಆದೇಶ ಹೊರಡಿಸಲಾಗಿದೆ. ಉಳಿದಂತೆ ಹೊಸ ಸಮಿತಿಯನ್ನು ಸದರಿ ಅಧ್ಯಕ್ಷರು ಕೂಡಲೇ ರಚಿಸುವಂತೆ ಸೂಚಿಸಲಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಮೇಶ್ ತಿಳಿಸಿದ್ದಾರೆ.