ಮಡಿಕೇರಿ, ಜೂ. 11: ಇಂಡಿಯನ್ ಎಕ್ಸ್‍ಪ್ರೆಸ್ ಮುಂಬಯಿ ಮತ್ತು ಬೆಂಗಳೂರು ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಬೃಹತ್ ಆಹಾರ ಮತ್ತು ಆತಿಥ್ಯ ಉದ್ಯಮದ ವಸ್ತು ಪ್ರದರ್ಶನ ಭೇಟಿಗಾಗಿ ತಾ. 13 ರಂದು ಒಂದು ದಿನದ ಪ್ರವಾಸ ಹಾಗೂ ವಸ್ತು ಪ್ರದರ್ಶನ ವೀಕ್ಷಣೆ ಉಚಿತವಾಗಿ ಲಭ್ಯವಿದೆ.

ಕೊಡಗಿನ ಪ್ರಮುಖ ಆತಿಥ್ಯ ಉದ್ದಮೆದಾರರಿಗೆ ಈಗಾಗಲೇ ಇ-ಮೇಲ್ ಮುಖಾಂತರ ವಿಷಯವನ್ನು ತಿಳಿಸಲಾಗಿದೆ. ನೋಂದಣಿಯನ್ನು ರಾಜಶೇಖರ್ ಚೆ. ಯಳವತ್ತಿ, ಚೇರ್‍ಮೆನ್ ನ್ಯಾಚುರಲ್ ರಿಸೋರ್ಸ್‍ಸ್ ಡೆವಲಪ್‍ಮೆಂಟ್ ಸೆಂಟರ್, ಮಡಿಕೇರಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8880140455, 9844143855 ಇವರನ್ನು ಸಂಪರ್ಕಿಸಬಹುದಾಗಿದೆ.