ಸೋಮವಾರಪೇಟೆ,ಜೂ.10: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಅಂತರ್ರಾಷ್ಟ್ರೀಯ ರಕ್ತ ದಾನ ದಿನಾಚರಣೆ ಅಂಗವಾಗಿ ಸ್ಥಳೀಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾ. 14ರಂದು ರಕ್ತದಾನ ಶಿಬಿರ ಹಾಗೂ ರಕ್ತ ಗುಂಪು ಪರೀಕ್ಷೆ ನಡೆಯಲಿದೆ ಎಂದು ಪುಷ್ಪಗಿರಿ ಸಂಸ್ಥೆಯ ಯೋಜನಾ ನಿರ್ದೇಶಕರಾದ ಕೆ.ಜೆ.ಗಿರೀಶ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ತಾ. 14ರ ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸೋಮವಾರಪೇಟೆಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಮತ್ತು ರಕ್ತ ಗುಂಪು ಪರೀಕ್ಷೆ ನಡೆಯಲಿದ್ದು ಸಾರ್ವಜನಿಕರು ,ಸಂಘ ಸಂಸ್ಥೆಯವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾ ರಕ್ತ ನಿಧಿ ಕೇಂದ್ರದ ಅಧಿಕಾರಿ ಕರುಂಬಯ್ಯ,ವೈದ್ಯರಾದ ಸುಪರ್ಣಾ ಕೃಷ್ಣಾನಂದ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜೇಸೀ ವಲಯಾಧಿಕಾರಿ ಮಾಯಾ ಗಿರೀಶ್, ಉಪಾಧ್ಯಕ್ಷರಾದ ಜಯಲಕ್ಷ್ಮಿ,ಜೇಸೀ ನಿಕಟಪೂರ್ವ ಅಧ್ಯಕ್ಷ ಗುರುಪ್ರಸಾದ್ ಉಪಸ್ಥಿತರಿದ್ದರು.