ಗೋಣಿಕೊಪ್ಪಲು, ಜೂ. 7: ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ಕಾಯ್ದೆಗಳು ದುರುಪಯೋಗವಾಗದಿರುವಂತೆ ಆಯಾ ಸಮುದಾಯದ ಮುಖಂಡರುಗಳು ಎಚ್ಚರ ವಹಿಸಬೇಕೆಂದು ವೀರಾಜಪೇಟೆ ತಾಲೂಕು ಡಿವೈಎಸ್ಪಿ ನಾಗಪ್ಪ ಕರೆ ನೀಡಿದರು. ಗೋಣಿಕೊಪ್ಪಲುವಿನ ರಾಧಾ ಟೂರಿಸ್ಟ್ ಹೋಂನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಪರಿಶಿಷ್ಟ ಜಾತಿ, ಪಂಗಡಗಳ ಮುಖಂಡರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು ಇತ್ತೀಚೆಗೆ ದೌರ್ಜನ್ಯ ಪ್ರಕರಣಗಳು ಇಳಿಕೆ ಕಂಡಿವೆ. ಕೆಲವು ಮುಖಂಡರು ಇದನ್ನೇ ಬಂಡವಾಳ ಮಾಡಿಕೊಂಡು ಬಡವರನ್ನು ತಪ್ಪು ದಾರಿಗೆ ಎಳೆಯುವ ಕುರಿತು ಇಲಾಖೆಗೆ ಮಾಹಿತಿಗಳಿವೆ. ಇಂತಹವುಗಳಿಗೆ ಅವಕಾಶ ನೀಡಬಾರದು ಒಂದು ವೇಳೆ ದೌರ್ಜನ್ಯ ನಡೆದಿದ್ದೇ ಆದಲ್ಲಿ

(ಮೊದಲ ಪುಟದಿಂದ) ಪೊಲೀಸ್ ಇಲಾಖೆ ಸದಾ ಅವರÀ ರಕ್ಷಣೆಗೆ ನಿಲ್ಲುತ್ತದೆ ಎಂದರು.

ನೊಂದವರು ನೇರವಾಗಿ ಆಗಮಿಸಿ ಠಾಣೆಗೆ ಬಂದು ದೂರು ನೀಡಬಹುದು ಎಂದು ಹೇಳಿದ ನಾಗಪ್ಪ ಕೆಲವು ಮುಖಂಡರುಗಳು ಇತ್ತೀಚೆಗೆ ಬಡ ಜನತೆಯನ್ನು ಆಮಿಷಕ್ಕೆ ಒಳಪಡಿಸಿ ನಿಯಮಬಾಹಿರವಾಗಿ ಸರ್ಕಾರಿ ಜಾಗಗಳಲ್ಲಿ ನಿವೇಶನ ಕೊಡಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಅಲ್ಲದೆ ಗುಡಿಸಲು ನಿರ್ಮಿಸಿಕೊಂಡು ಕೆಲವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವದು ಇಂತಹ ನಿಯಮಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ನಿವೇಶನ ರಹಿತರು ಆಯಾಯ ಪಂಚಾಯ್ತಿ ವ್ಯಾಪ್ತಿಯಲ್ಲಿ ತಮ್ಮ ಹಕ್ಕುಗಳನ್ನು ನ್ಯಾಯಯುತವಾಗಿ ಪಡೆಯಲು ಮುಂದಾಗಬೇಕು. ಇಲಾಖೆಯು ನಿಯಮಬಾಹಿರ ಚಟುವಟಿಕೆಗೆ ಸಹಕಾರ ನೀಡುವದಿಲ್ಲ ಎಂದರು. ಪೊಲೀಸ್ ಠಾಣೆಯ ಠಾಣಾಧಿಕಾರಿ ಗಳು ವಾರಕ್ಕೊಮ್ಮೆ ಆದಿವಾಸಿಗಳು ವಾಸಿಸುವ ಲೈನ್ ಮನೆಗಳಿಗೆ ತೆರಳಿ ಅವರ ಕಷ್ಟ ಸುಖಗಳನ್ನು ಆಲಿಸಬೇಕು. ಅಲ್ಲದೆ ಅವರಿಗೆ ಜಾಗೃತಿ ಕಾರ್ಯಕ್ರಮಗಳು ನಡೆಸಬೇಕೆಂದು ಅಧಿಕಾರಿಗಳಿಗೆ ನಿರ್ದೆಶನ ನೀಡಿದರು. ಲೈನ್ ಮನೆಯಲ್ಲಿ ವಾಸಿಸುವವರು ಚೀಟಿ ನೀಡುವ ಪದ್ದತಿ ಸರಿಯಲ್ಲ ಈ ಬಗ್ಗೆ ತೋಟ ಮಾಲೀಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯು ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವ ಕೆಲಸದಲ್ಲಿ ಸದಾ ಮುಂದಿರುತ್ತದೆ ಎಂದರು.

ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ಯುವಕ ಯುವತಿಯರಿಗೆ ಉದ್ಯೋಗ ನೀಡಲು ತಾಲೂಕು ಮಟ್ಟದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ತರಬೇತಿ ನಡೆಸಲಾಗುವದು ಇದರ ಪ್ರಯೋಜನ ಪಡೆಯುವ ದರೊಂದಿಗೆ ಆದಿವಾಸಿಗಳು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯಬಹುದೆಂದು ಮಾಹಿತಿ ಒದಗಿಸಿದರು. ವೀರಾಜಪೇಟೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ತೋಟ ಮಾಲೀಕರ ಬಳಿ ಅಸ್ಸಾಂ ಭಾಗದಿಂದ ಹೆಚ್ಚಾಗಿ ಕೂಲಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಇವರ ಮೂಲ ದಾಖಲಾತಿಗಳನ್ನು ಪರಿಶೀಲಿಸಬೇಕಾಗಿದೆ. ಇಂತಹ ಕಾರ್ಮಿಕರಿಗೆ ಇಲ್ಲಿ ಈ ಭಾಗದಿಂದ ಯಾವದೇ ಆಧಾರ್ ಕಾರ್ಡ್, ಪಡಿತರ ಚೀಟಿ ವಿತರಿಸದಂತೆ ಕ್ರಮ ವಹಿಸಬೇಕೆಂದು ತಿತಿಮತಿ ಮುಖಂಡರಾದ ಶಿವಣ್ಣ ಅಧಿಕಾರಿಗಳ ಗಮನ ಸೆಳೆದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು.

ಪೊನ್ನಂಪೇಟೆ ವೃತ್ತ ನಿರೀಕ್ಷಕರಾದ, ಕುಟ್ಟ ವಲಯ ವೃತ್ತ ನಿರೀಕ್ಷಕರಾದ ಮಹೇಶ್, ವೀರಾಜಪೇಟೆ ವಲಯ ವೃತ್ತ ನಿರೀಕ್ಷಕರಾದ ಕ್ಯಾತೇಗೌಡ, ಪೊನ್ನಂಪೇಟೆ ಠಾಣಾಧಿಕಾರಿ ಗಳಾದ ಮಹೇಶ್, ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಶ್ರೀನಿವಾಸ್, ಕುಟ್ಟ ಠಾಣಾಧಿಕಾರಿ ಗಳಾದ ಮೊಹಿದೀನ್, ಶ್ರೀಮಂಗಲ ಠಾಣಾಧಿಕಾರಿಗಳಾದ ಟಿ.ಎಂ.¸ Áಬು, ವೀರಾಜಪೇಟೆ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕಿನ ಪರಿಶಿಷ್ಟ ಜಾತಿ, ಪಂಗಡಗಳ ಮುಖಂಡರುಗಳಾದ ರಜನಿಕಾಂತ್,ಸಿಂಗಿ ಸತೀಶ್, ಕುಮಾರ್,ಚೆಲುವ ಹೆಚ್.ಕೆ. ಹೆಚ್.ಆರ್.ಶಿವಣ್ಣ, ಜೆ.ಕೆ.ತಿಮ್ಮ, ಜೆ.ಎಂ.ಸೋಮಯ್ಯ, ಪರಶುರಾಮ್, ಜಯಮ್ಮ, ಕೃಷ್ಣಪ್ಪ, ಗೋಪಾಲ, ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

-ಹೆಚ್.ಕೆ.ಜಗದೀಶ್