ಗೋಣಿಕೊಪ್ಪ ವರದಿ, ಜೂ. 7 : ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ತಾ 8 ರಿಂದ (ಇಂದಿನಿಂದ) ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಬೊಳ್ಳಿನಮ್ಮೆ ಕಾರ್ಯಕ್ರಮ ನಡೆಯಲಿದೆ. ಜೂನ್ 8 ರಂದು ಬೆ. 9 ಗಂಟೆಗೆ ಪಾಲಿಬೆಟ್ಟ ರಸ್ತೆ ಜಂಕ್ಷನ್ನಿಂದ ಕೊಡವ ಜಾನಪದ ಸಾಂಸ್ಕøತಿಕ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಉದ್ಘಾಟಿಸಲಿದ್ದಾರೆ. ಸಾಂಸ್ಕøತಿಕ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿಜಾಯ್, ಪುಸ್ತಕ ಮತ್ತು ವಸ್ತು ಪ್ರದರ್ಶನವನ್ನು ಸಿಇಒ ಕೆ. ಲಕ್ಷ್ಮಿಪ್ರಿಯಾ ಉದ್ಘಾಟಿಸ ಲಿದ್ದಾರೆ. ಕೊಡವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಚಂಡೆಮೇಳ, ಕಾಪಳಕಳಿ, ಉಮ್ಮತ್ತಾಟ್, ಕೋಲಾಟ್, ಪರೆಯಕಳಿ, ದುಡಿಕೊಟ್ಟ್ ಪಾಟ್, ತಾಲಿಪಾಟ್, ಉರ್ಟಿಕೊಟ್ಟ್ ಆಟ್, ಕತ್ತಿಯಾಟ್,
(ಮೊದಲ ಪುಟದಿಂದ) ಬಾಳೋಪಾಟ್ ನಡೆಯಲಿದೆ. ಬೆ. 10.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಸುನಿಲ್ ಸುಬ್ರಮಣಿ, ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಜ್ಜಿನಿಕಂಡ ಗಣಪತಿ, ಗ್ರಾ. ಪಂ ಅಧ್ಯಕ್ಷೆ ಸೆಲ್ವಿ, ಜಿ. ಪಂ. ಸದಸ್ಯ ಸಿ.ಕೆ. ಬೋಪಣ್ಣ, ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟೀರ ನಾಣಯ್ಯ, ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ. ಕಳ್ಳಿಚಂಡ ಲಲಿತಾ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಯಂಗ ಕಲಾರಂಗದಿಂದ ಕುರ್ಕಂಗ ನಾಟಕ ಪ್ರದರ್ಶನ, ಚೇಂದೀರ ನಿರ್ಮಲಾ ಬೋಪಣ್ಣ ತಂಡದಿಂದ ಕೊಡವ ಆರ್ಕೆಸ್ಟ್ರಾ ನಡೆಯಲಿದೆ.