ಶ್ರೀಮಂಗಲ, ಜೂ. 7 : ಕೊಡಗು ಜಿಲ್ಲೆ ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ದುರಂತದಿಂದ ಭೂಕುಸಿತಕ್ಕೆ ತುತ್ತಾಗಿ ಕಂಗೆಟ್ಟಿದ್ದು, ಇದರ ಆತಂಕದಲ್ಲೇ ದಿನದೂಡುತ್ತಿರುವ ನಡುವೆ ಮಳೆ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸಲು ಪ್ರಸ್ತಾವನೆ ಕೈಗೊಂಡಿರುವದು ಕಳವಳಕಾರಿ ಅಂಶವಾಗಿದೆ. ಮೋಡ ಬಿತ್ತನೆಯನ್ನು ಸ್ಥಗಿತಗೊಳಿಸುವಂತೆ ಕೊಡಗು ಬೆಳೆಗಾರರ ಒಕ್ಕೂಟ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೆÉೀಟಿ ಮಾಡಿ ಮನವಿ ಸಲ್ಲಿಸಿತು.

ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಗೆ ಒಕ್ಕೂಟದ ಅಧ್ಯಕ್ಷ ಕೈಬಲೀರ ಹರೀಶ್ ಅಪ್ಪಯ್ಯ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದು ಕೃತಕÀ ಮಳೆ ಸುರಿಸುವ ಯಾವದೇ ಕಾರ್ಯಕ್ರಮಕ್ಕೆ ಬೆಳೆಗಾರರ ಒಕ್ಕೂಟ ವಿರೋಧವಿರುವ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರುವಂತೆ ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಅವರು ಕಳೆದ ಸಾಲಿನಲ್ಲಿ ಪ್ರಾಕೃತಿಕ ದುರಂತದ ಸಾವು ನೋವು ಉಂಟಾಗಿದ್ದು, ಈ ದುರಂತದಿಂದ ಸಂತ್ರಸ್ತರಾಗಿರುವ ಕುಟುಂಬದವರ ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಅವರಿಗೆ ಪುನರ್ ವಸತಿ ಹಾಗೂ ಶಾಶ್ವತ ನೆಲೆ ಕಲ್ಪಿಸಲು ಕೃತಕ ಮಳೆ ಸುರಿಸಲು ವಿನಿಯೋಗಿಸುವ ಅನುಧಾನವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಒಕ್ಕೂಟ ಉಪಾಧ್ಯಕ್ಷರಾದ ಕೇಚಂಡ ಕುಶಾಲಪ್ಪ, ಪ್ರ. ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಪದಾಧಿಕಾರಿಗಳಾದ ಅರಮಣಮಾಡ ಸತೀಶ್ ದೇವಯ್ಯ, ಅಣ್ಣಳಮಾಡ ಸುರೇಶ್ ಮುತ್ತಣ್ಣ, ಕಾಲಿಮಾಡ ರಶಿಕ, ಐಚೆಟ್ಟೀರ ಸುಬ್ಬಯ್ಯ, ಐಚೆಟ್ಟೀರ ರಂಜು ಮತ್ತಿತರರು ಹಾಜರಿದ್ದರು.