ಗೋಣಿಕೊಪ್ಪ ವರದಿ, ಜೂ. 6: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಆವರಣದಲ್ಲಿ ಸುಮಾರು 100 ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಗಿಡ ನೆಟ್ಟು ಪರಸರ ಕಾಳಜಿ ಮೂಡಿಸಿದರು. ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾದ್ಯಾಪಕರುಗಳಾದ ಡಾ. ಕೆಂಚರೆಡ್ಡಿ, ಡಾ. ಸತೀಶ್ ಉಪಸ್ಥಿತರಿದ್ದರು.